ಚಿಕ್ಕಬಳ್ಳಾಪುರ: ವೈದ್ಯಕೀಯ ಪರೀಕ್ಷೆಗೆ ರಕ್ತ ತೆಗೆಯುವಾಗ(ಬ್ಲಡ್ ಡ್ರಾ) ನವಜಾತ ಶಿಶು ಮೃತಪಟ್ಟಿದೆ ಎಂಬ ಆರೋಪ ಕೇಳಿಬಂದಿದೆ. ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ತಾಲೂಕಿನ ಕೊರೇನಹಳ್ಳಿ ಗ್ರಾಮದ ನಿವಾಸಿಗಳಾದ ಸಂಧ್ಯಾ ಹಾಗೂ ಗಂಗರಾಜು ದಂಪತಿಯ 3 ತಿಂಗಳ ಮಗು ಸಾವನ್ನಪ್ಪಿದೆ. ಕಳೆದ ಎರಡು ದಿನಗಳ ಹಿಂದೆ ಮಗು ವಾಂತಿ ಹಾಗೂ ಮೂತ್ರ ವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲಾಗಿತ್ತು. ಮಗುವಿಗೆ ಯಾವುದೇ ತೊಂದರೆ ಇಲ್ಲವೆಂದು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ವೈದ್ಯರು ಸೂಚಿಸಿದ್ದರಂತೆ.
ವೈದ್ಯರ ಸೂಚನೆ ಮೇರೆಗೆ ಮಗವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೇ, ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಮುಂಚಿತವಾಗಿ ಮತ್ತೊಮ್ಮೆ ರಕ್ತ ಪರೀಕ್ಷೆ ನಡೆಸಲು ಮುಂದಾಗಿದ್ದು, ಆಸ್ಪತ್ರೆಯ ನರ್ಸ್ ರಕ್ತ ಸಂಗ್ರಹಿಸುವ ವೇಳೆ ಮಗು ಸಾವನ್ನಪ್ಪಿದೆಯಂತೆ. ಮಗುವಿನ ಸಾವಿನಿಂದ ಪೋಷಕರು ಆಸ್ಪತ್ರೆಯ ನರ್ಸ್ ಮತ್ತು ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈದ್ಯರ ಸ್ಪಷ್ಟನೆ ಹೀಗಿದೆ.. ಈ ಕುರಿತು ವೈದ್ಯ ರಾಜರೆಡ್ಡಿ ಮಾತನಾಡಿ, ಇದರಲ್ಲಿ ವೈದ್ಯರ ನಿರ್ಲಕ್ಷ್ಯ ಏನು ಇಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ವೈದ್ಯರು ಏನು ಚಿಕಿತ್ಸೆ ಮಾಡಬೇಕೊ ಅದೆಲ್ಲವೆನ್ನು ಮಾಡಿದ್ದಾರೆ. ರಕ್ತವನ್ನು ಟೆಸ್ಟ್ ತೆಗೆಯುವಾಗ ಮಗು ಫಿಟ್ಸ್ನಿಂದ ಬಿದ್ದಿದೆ. ಅಷ್ಟರಲ್ಲೇ ಮೃತಪಟ್ಟಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತುಮಕೂರಲ್ಲಿ ತಾಯಿ ಮಗು ಸಾವು ಪ್ರಕರಣ: ಕಠಿಣ ಕ್ರಮ ಕೈಗೊಳ್ಳುವಂತೆ ಲಲಿತಾನಾಯಕ್ ಒತ್ತಾಯ