ಚಿಕ್ಕಬಳ್ಳಾಪುರ: ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವವರು ನಿಜವಾದ ರೈತರಲ್ಲ, ಅವರೆಲ್ಲರೂ ದಲ್ಲಾಳಿಗಳು ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.
ಚಿಂತಾಮಣಿಯಲ್ಲಿ ಕಿಸಾನ್ ಸನ್ಮಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ಪಂಜಾಬ್ನವರು ನಿಜವಾದ ರೈತರಲ್ಲ. ಅವರು ದಲ್ಲಾಳಿಗಳು. ಅವರು ರೈತರಿಂದ ಭತ್ತ, ಗೋಧಿ ಪಡೆದು ಬಚ್ಚಿಟ್ಟು ಆಹಾರ ಕೊರತೆಯೆಂದು ನಂಬಿಸಿ ನೂರು ರೂಪಾಯಿ ಬೆಲೆ ಬಾಳುವ ಆಹಾರ ಧಾನ್ಯಗಳನ್ನು ಸಾವಿರಾರು ರೂಪಾಯಿಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ.
ಓದಿ : ನಾಯಕತ್ವದ ಬಗ್ಗೆ ಮಾತನಾಡಲು ಬಸನಗೌಡ ಪಾಟೀಲ್ ಯತ್ನಾಳ್ ಯಾರು: ಡಿವಿಎಸ್ ಕಿಡಿ
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರುವುದರ ಮೂಲಕ ದೇಶದ ರೈತರಿಗೆ ನಿಜವಾದ ಸ್ವಾತಂತ್ರ್ಯ ನೀಡಿದೆ. ಈ ಹಿಂದೆ ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಎಪಿಎಂಸಿಯನ್ನು ರದ್ದುಗೊಳಿಸುವುದಾಗಿ ಹೇಳಿದ್ದರು. ಆದರೆ ಈಗ ಎಪಿಎಂಸಿಯನ್ನು ರದ್ದು ಮಾಡದೆ ರೈತರು ಎಲ್ಲಿ ಬೇಕಾದರೂ ತಮ್ಮ ಬೆಳೆಗಳನ್ನು ಮಾರಾಟ ಮಾಡುವ ಕಾನೂನು ತರಲಾಗಿದೆ ಎಂದರು.