ಚಿಕ್ಕಬಳ್ಳಾಪುರ: ಲಾಕ್ಡೌನ್ನಿಂದಾಗಿ ಮದ್ಯ ಸಿಗದೆ ಕಂಗಾಲಾಗಿದ್ದ ಕುಡುಕರು ಎಣ್ಣೆಗಾಗಿ ಬಾರ್ ಗೋಡೆ ಕೊರೆದು ಅಪಾರ ಪ್ರಮಾಣದ ಮದ್ಯ ದೋಚಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಬಿಬಿ ರಸ್ತೆಯ ಬಾಲಾಜಿ ಟಾಕೀಸ್ ಮುಂಭಾಗ ಇರುವ ಬಾಲಾಜಿ ವೈನ್ ಶಾಪ್ ಗೋಡೆ ಕೊರೆದಿರುವ ದುಷ್ಕರ್ಮಿಗಳು ಕೈಗೆ ಸಿಕ್ಕಷ್ಡು ಮದ್ಯ ದೋಚಿ ಪರಾರಿಯಾಗಿದ್ದಾರೆ.
ವಿಷಯ ತಿಳಿದ ಚಿಕ್ಕಬಳ್ಳಾಪುರ ನಗರ ಠಾಣೆಯ ಪೊಲೀಸರು ಮತ್ತು ಅಬಕಾರಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.