ETV Bharat / state

ಚಿಕ್ಕಬಳ್ಳಾಪುರ: ಬಟ್ಟೆ ಒಣಗಿಸುವ ಜಾಗಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ

ಬಟ್ಟೆ ಒಣಗಿಸುವ ಜಾಗದ ವಿಚಾರಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರು ನಗರದ ವಾರ್ಡ್ 23 ರಲ್ಲಿ ನಡೆದಿದೆ.

ಬಟ್ಟೆ ಒಣಗಿಸುವ ಜಾಗದ ವಿಚಾರಕ್ಕೆ ಗಲಾಟೆ
ಬಟ್ಟೆ ಒಣಗಿಸುವ ಜಾಗದ ವಿಚಾರಕ್ಕೆ ಗಲಾಟೆ
author img

By

Published : Nov 28, 2022, 2:55 PM IST

ಚಿಕ್ಕಬಳ್ಳಾಪುರ: ಬಟ್ಟೆ ಒಣಗಿಸುವ ಜಾಗದ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ನಡುವೆ ಜಗಳ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಜಿಲ್ಲೆಯ ಗೌರಿಬಿದನೂರು ನಗರದ ವಾರ್ಡ್ 23 ರಲ್ಲಿ ನಡೆದಿದೆ. ಮನ್ಸೂರ್ ಖಾನ್ (23) ಮೃತ ವ್ಯಕ್ತಿ. ನಗರದ ಮಿಟ್ಟೇನಹಳ್ಳಿ‌ ನಿವಾಸಿಗಳಾದ ಅಕ್ರಂ (50), ಗೌಸ್ ಫೀರ್ (24) ಆರೋಪಿಗಳೆಂದು ತಿಳಿದುಬಂದಿದೆ.

ನಗರದ ವಾರ್ಡ್ ನಂ.23 ರ ಮಿಟ್ಟೇನಹಳ್ಳಿ ನಿವಾಸಿಯಾದ ಅಕ್ರಂ ಹಾಗೂ ಶಬನಾ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದರು. ಶಬನಾ ಅವರ ಮನೆಯ ಪಕ್ಕದಲ್ಲಿರುವ ಖಾಲಿ‌ ನಿವೇಶನದಲ್ಲಿ ಅಕ್ರಂ‌ ಬಟ್ಟೆ ಒಣಗಿಸಲು ದಾರ ಕಟ್ಟಿದ್ದಾರೆ. ನನ್ನ ನಿವೇಶನದಲ್ಲಿ ಕಟ್ಟಿರುವ ದಾರವನ್ನು ತೆಗೆಯಿರಿ ಎಂದು ಶಬನಾ ಹೇಳಿದ್ದಾರೆ ಎನ್ನಲಾಗ್ತಿದೆ.

ಬಟ್ಟೆ ಒಣಗಿಸುವ ಜಾಗದ ವಿಚಾರಕ್ಕೆ ಗಲಾಟೆ

ನಾವು ಶೆಡ್ ಹಾಕಬೇಕು ಎಂದು ಹೇಳಿದ ತಕ್ಷಣ ಇದಕ್ಕೆ ಅಕ್ರಂ ಹಾಗೂ ಅವರ ಮಗ ಗೌಸ್ ಫೀರ್ ಜಗಳ ತೆಗೆದು ಶಬನಾ ಮೇಲೆ ಗಲಾಟೆ ಮಾಡಲು ಮುಂದಾಗಿದ್ದಾರೆ. ಗಲಾಟೆ ಮಾಡುತ್ತಿರುವ ವಿಚಾರವನ್ನು ಶಬನಾ ತನ್ನ ಮಗ ಮನ್ಸೂರ್‌ಗೆ ತಿಳಿಸಿದ್ದಾಳೆ. ಮನ್ಸೂರ್​ ಘಟನೆಯ ಬಗ್ಗೆ ಪ್ರಶ್ನಿಸುತ್ತಿದ್ದಂತೆ ಗೌಸ್ ಫೀರ್ ಹಾಗೂ ಅಕ್ರಂ ಮೃತ ಮನ್ಸೂರ್​ ಹೊಟ್ಟೆಯ ಎಡ ಭಾಗಕ್ಕೆ ಚಾಕುವಿನಿಂದ ತಿವಿದು ಗಾಯಪಡಿಸಿದ್ದಾರೆ‌.

ಇದನ್ನೂ ಓದಿ: ಬಿಜೆಪಿ‌ ಮುಖಂಡ, ವ್ಯಾಪಾರಿ ಮಲ್ಲಿಕಾರ್ಜುನ ಮುತ್ಯಾಲ ಕೊಲೆ ಆರೋಪಿಗಳ ಬಂಧನ

ಘಟನೆಯ ಬಳಿಕ ಅಕ್ಕಪಕ್ಕದ ಮನೆಯವರು ಮನ್ಸೂರ್​ನನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗೆಂದು ರವಾನಿಸಿದ್ದಾರೆ. ಹೆಚ್ಚಿನ‌ ಚಿಕಿತ್ಸೆಗೆ ಬೆಂಗಳೂರಿಗೆ ಹೋಗುವ ವೇಳೆ ದಾರಿ ಮಧ್ಯೆ ಮನ್ಸೂರ್ ಮೃತಪಟ್ಟಿದ್ದಾರೆ‌. ಸ್ಥಳಕ್ಕೆ ಎಸ್ಪಿ‌ ನಾಗೇಶ್ ಹಾಗೂ ನಗರಠಾಣೆಯ ಪೊಲೀಸರು‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.