ETV Bharat / state

ಚಿಕ್ಕಬಳ್ಳಾಪುರ: ಹೈಟೆನ್ಶನ್​ ವೈರ್ ತಗುಲಿ ಲೈನ್​​ಮ್ಯಾನ್ ಸಾವು - The death of a lineman by touching high tension wire

ಹೈಟೆನ್ಶನ್ ವಿದ್ಯುತ್ ತಂತಿ ಸರಿಪಡಿಸುವಾಗ ಲೈನ್​​ಮ್ಯಾನ್​​ ನಾಗರಾಜ್ ವಲಿ ಎಂಬುವರು ವೈರ್​ ತಗುಲಿ ಕರೆಂಟ್​ ಶಾಕ್​ನಿಂದ ಸಾವಿಗೀಡಾಗಿದ್ದಾರೆ.

ಲೈನ್​​ಮ್ಯಾನ್ ಸಾವು
ಲೈನ್​​ಮ್ಯಾನ್ ಸಾವು
author img

By

Published : Jan 27, 2021, 1:38 PM IST

ಚಿಕ್ಕಬಳ್ಳಾಪುರ: ಹೈಟೆನ್ಶನ್​ ವಿದ್ಯುತ್ ತಂತಿ ಸರಿಪಡಿಸಿ ಕೆಳಗೆ ಇಳಿಯುವ ವೇಳೆ ತಂತಿ ತಗುಲಿ ಲೈನ್‌ಮ್ಯಾನ್ ಮೃತಪಟ್ಟ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗೊಟ್ಟುಕುಂಟೆ ಗ್ರಾಮದ ಬಳಿ ನಡೆದಿದೆ.

ಲೈನ್​​ಮ್ಯಾನ್​​ ನಾಗರಾಜ್ ವಲಿ (27) ಮೃತ ವ್ಯಕ್ತಿ. ಮೃತ ಲೈನ್ ಮ್ಯಾನ್ ಮಹಾರಾಷ್ಟ್ರದ ಕೊಲ್ಲಾಪುರ ನಿವಾಸಿಯಾಗಿದ್ದ, ನಾಗರಾಜ್ ವಲಿ ಕಳೆದ 2 ವರ್ಷಗಳಿಂದ ಗೌರಿಬಿದನೂರಲ್ಲಿ ಕಾರ್ಯನಿರ್ವಹಿಸುತ್ತಿದ್ದರು‌.

ತಾಲೂಕಿನ‌ ಬಾಗೇಪಲ್ಲಿ ಮಾರ್ಗದ ಗೊಟ್ಟುಕುಂಟೆ ಗ್ರಾಮದ ಬಳಿ ಹೈನ್ಶನ್​ ವಿದ್ಯುತ್ ತಂತಿ ರಿಪೇರಿಯಾಗದಿರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆ ತಾಲೂಕಿನ ವಿದುರಾಶ್ವತ್ಥ ಕೆಇಬಿ ಕಚೇರಿಯ ಕಿರಿಯ ಇಂಜಿನಿಯರ್ ರವಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಕಂಬವನ್ನು ಹತ್ತಿದ್ದ ನಾಗರಾಜ್ ವಲಿ ರಿಪೇರಿ ಕಾರ್ಯವನ್ನು ಮುಗಿಸಿ ಕೆಳಗೆ ಇಳಿಯುವ ವೇಳೆ ಹೈಟೆನ್ಶನ್ ವೈರ್​ಗೆ ಅವರ ಬಲಗೈ ತಗುಲಿ ಮೃತಪಟ್ಟಿದ್ದಾರೆ.

ಓದಿ:ಚಿಕ್ಕಬಳ್ಳಾಪುರ: ಸರ್ಕಾರಿ ಕಚೇರಿಯಲ್ಲಿ ನೇಣಿಗೆ ಶರಣಾದ ವ್ಯಕ್ತಿ

ಸಿಬ್ಬಂದಿ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದು, ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಶಶಿಧರ್ ಹಾಗೂ ಗ್ರಾಮಾಂತರ ಠಾಣೆಯ ಪಿಎಸ್​ಐ ಮೋಹನ್ ಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.