ಚಿಕ್ಕಬಳ್ಳಾಪುರ : ಕೆಹೆಚ್ ಪಿ ಫೌಂಡೇಶನ್ ಅಧ್ಯಕ್ಷರಾದ ಕೆ ಹೆಚ್ ಪುಟ್ಟಸ್ವಾಮಿಗೌಡರ ನೂತನ ಕಚೇರಿಯ ಗೃಹ ಪ್ರವೇಶಕ್ಕೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಜನಪ್ರಿಯ ನಟ ದಿವಂಗತ ಎನ್ ಟಿ ರಾಮರಾವ್ ಅವರ ಮೊಮ್ಮಗ ನಂದಮೂರಿ ತಾರಕ ರತ್ನ ಆಗಮಿಸಿದ್ದಾರೆ. ಗೃಹಪ್ರವೇಶಕ್ಕೆ ಆಗಮಿಸಿದ ನಟ ನಂದಮೂರಿ ತಾರಕ ರತ್ನ ಅವರನ್ನು ಮೆರವಣಿಗೆ ಮೂಲಕ ಪಟಾಕಿ ಸಿಡಿಸಿ, ಹೂವಿನ ಹಾರಹಾಕಿ ಸ್ವಾಗತಿಸಲಾಯಿತು.
ಬಳಿಕ ಮಾತನಾಡಿದ ನಟ ನಂದಮೂರಿ ತಾರಕ ರತ್ನ ಅವರು ಕೆ ಹೆಚ್ ಪಿ ಫೌಂಡೇಶನ್ ಅಧ್ಯಕ್ಷರಾದ ಪುಟ್ಟಸ್ವಾಮಿ ಗೌಡರಿಗೆ ಹಾಗೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಪುಟ್ಟಸ್ವಾಮಿ ಗೌಡರು ಸಮಾಜ ಸೇವೆ ಮಾಡುತ್ತಿರುವುದನ್ನು ತಿಳಿದು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಇಂತಹ ವ್ಯಕ್ತಿ ರಾಜಕೀಯ ಕ್ಷೇತ್ರಕ್ಕೆ ಬರಬೇಕು. ಇವರನ್ನು ಮುಂದಿನ ಚುನಾವಣೆಯಲ್ಲಿ ಜನರು ಆಯ್ಕೆ ಮಾಡಬೇಕು ಎಂದ ಅವರು ಗೌರಿಬಿದನೂರು ತಾಲೂಕಿಗೆ ನಮ್ಮ ತಾತ ಎನ್ ಟಿ ರಾಮರಾವ್ ಅವರು ಎರಡು ಬಾರಿ ಬೇಟಿ ನೀಡಿದ್ದರು ಎಂದು ಹೇಳಿದರು.
ಇದನ್ನೂ ಓದಿ : ದಾವಣಗೆರೆ ಬೆಣ್ಣೆ ದೋಸೆ ಸವಿದ ರಮ್ಯಾ.. ಪದ್ಮಾವತಿ ನೋಡಲು ಮುಗಿಬಿದ್ದ ಫ್ಯಾನ್ಸ್, ಟ್ರಾಫಿಕ್ ಜಾಮ್