ಚಿಕ್ಕಬಳ್ಳಾಪುರ: ಅವಧಿ ಮುಗಿದ್ರೂ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ತಮ್ಮ ಉಪ ಸಭಾಧ್ಯಕ್ಷ್ಯ ಸ್ಥಾನಕ್ಕೆ ರಾಜೀನಾಮೆ ನೀಡದೆ ಗೂಟದ ಕಾರನ್ನು ಇನ್ನೂ ಬಳಕೆ ಮಾಡುತ್ತಿದ್ದಾರೆಂದು ಕ್ಷೇತ್ರದ ಮಾಜಿ ಶಾಸಕ ಸುಧಾಕರ್ ಲೇವಡಿ ಮಾಡಿದ್ದಾರೆ.
ನಿನ್ನೆ ತಾಲೂಕಿನ ಮುರಗಮಲ್ಲಾ ಗ್ರಾಮದಲ್ಲಿ ಸಂಸದ ಮುನಿಸ್ವಾಮಿ ಜೊತೆ ಬೋರ್ವೆಲ್ ಕೊರೆಸುವ ಕಾರ್ಯಕ್ರಮಕ್ಕೆ ಹಾಜರಾಗಿ ನಂತರ ಮಾತನಾಡಿದ ಮಾಜಿ ಶಾಸಕ ಎಂ.ಸಿ ಸುಧಾಕರ್ ಕ್ಷೇತ್ರದ ಹಾಲಿ ಶಾಸಕರ ವಿರುದ್ದ ಕಿಡಿಕಾರಿದ್ದಾರೆ.
2013ರಲ್ಲಿ ಕ್ಷೇತ್ರಕ್ಕೆ ಸ್ವಾತಂತ್ರ ದೊರಕ್ಕಿದ್ದು, ಕಳೆದ 6 ವರ್ಷಗಳಿಂದಲೂ ಸಾಕಷ್ಟು ಅಭಿವೃದ್ದಿ ಕಂಡಿದ್ದು ಜನರು ನೀರಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ಜನಸಮಾನ್ಯರು ಮೆಚ್ಚುಗೆಯನ್ನು ನೀಡುತ್ತಿದ್ದಾರೆಂದು ಉಪಸಭಾಧ್ಯಕ್ಷರ ಕ್ಷೇತ್ರದ ಬಗ್ಗೆ ಲೇವಡಿ ಮಾಡಿದ್ದಾರೆ. ನನ್ನ ಆಡಳಿತ ಸಮಯದಲ್ಲಿ ನೀರಿನ ಅಭಾವದ ಬಗ್ಗೆ ಸರ್ಕಾರದ ಗಮನವನ್ನು ಸೆಳೆದು ನಿಧಿಯನ್ನು ತರಲಾಗಿತ್ತು. ಆದರೆ 2013 ರ ನಂತರ ಟ್ಯಾಂಕರ್ ಗಳ ಸಂಸ್ಕೃತಿ ಪ್ರಾರಂಭ ಮಾಡಿದ್ದಾರೆ ಎಂದು ಕಿಡಿಕಾರಿದರು.
ಮಾಜಿ ಶಾಸಕ ಎಂ.ಸಿ ಸುಧಾಕರ್ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದರು. ಇನ್ನೂ ಸ್ವಕ್ಷೇತ್ರದಲ್ಲಿಯೂ ಸುಧಾಕರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ತಾರೆ ಎಂದು ಸಾಕಷ್ಟು ಸುದ್ದಿ ಮಾಡಿದ್ದರು. ಅಷ್ಟೇ ಅಲ್ಲದೇ ಬಿಜೆಪಿ ಸಭೆಗಳಲ್ಲಿಯೂ ಕಾಣಿಸಿಕೊಂಡಿದ್ದ ಮಾಜಿ ಶಾಸಕರು ತಮ್ಮ ಕಾರ್ಯಕರ್ತರು, ಹಿರಿಯರ ಸಭೆ ಕರೆದು ನಿರ್ಧಾರ ತೆಗೆಕೊಳ್ಳುವುದಾಗಿ ಹೇಳಿಕೆ ನೀಡಿದ್ದರು.
.