ಚಿಕ್ಕಬಳ್ಳಾಪುರ: ಬೀದಿ ನಾಯಿಗಳ ದಾಳಿಗೆ ಕುದುರೆ ಮರಿ ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ಸುಮಾರು 7 ರಿಂದ 8 ಬೀದಿ ನಾಯಿಗಳು ಮರಿ ಕುದುರೆಯನ್ನು ಕಚ್ಚುತ್ತಿದ್ದು, ಸಾರ್ವಜನಿಕರು ನಾಯಿಗಳ ದಾಳಿಯನ್ನು ತಪ್ಪಿಸಿದ್ದಾರೆ. ನಾಯಿ ದಾಳಿಗೆ ಒಳಗಾದ ಕುದುರೆ ಸ್ಥಿತಿ ಗಂಭೀರವಾಗಿದ್ದು, ಕುದುರೆ ಮೇಲೆ ನಾಯಿಗಳ ದಾಳಿ ವಿಡಿಯೋ ಇದೀಗ ವೈರಲ್ ಆಗಿದೆ.
ಇನ್ನು ತನ್ನ ಮರಿಯ ದುಃಖವನ್ನ ನೋಡಿ ತಾಯಿ ಕುದುರೆಯ ರೋದನೆ ಮುಗಿಲು ಮುಟ್ಟಿದ್ದು, ಈ ದೃಶ್ಯ ಮನಕಲುಕುವಂತಿದೆ. ನಗರದಲ್ಲಿನ ಬೀದಿ ನಾಯಿಗಳ ಅಟ್ಟಹಾಸದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ನಾಗರಿಕರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.