ಚಿಕ್ಕಬಳ್ಳಾಪುರ: ಗೌರಿಬಿದನೂರು ಗ್ರಾಮಾಂತರ ಠಾಣೆಯ ಪಿಎಸ್ಐ ಮೋಹನ್ ಕುಮಾರ್ ಇಂದು ಬೆಳಗ್ಗೆ 6 ಗಂಟೆಯಿಂದ ನಗರದ ರೈಮಂಡ್ಸ್ ಗಾರ್ಮೆಂಟ್ಸ್ ಹಾಗೂ ಗುಂಡಾಪುರ ಬಳಿ ಸ್ಪೆಷಲ್ ಡ್ರೈವ್ ಕಾರ್ಯಕ್ರಮವನ್ನು ಹಮ್ಮಿಕೊಂಡು ಆಟೋಗಳ ತಪಾಸಣೆ ನಡೆಸಿ ದಾಖಲಾತಿ ಇಲ್ಲದ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಆಟೋಗಳಿಂದ ಅಪಘಾತಗಳು ಹೆಚ್ಚಾಗಿರುವ ಕಾರಣ ಆಟೋಗಳಲ್ಲಿ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಹೋಗಲಾಗುತ್ತಿದೆ. ಈ ವೇಳ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಆಗುತ್ತಿದೆ ಎಂದು ದಾಖಲಾತಿ ಇಲ್ಲದ ಆಟೋಗಳನ್ನು ಪೊಲೀಸರು ವಶಪಡಿಸಿಕೊಂಡರು.
ಈಗಾಗಲೇ ಸಾಕಷ್ಟು ಬಾರಿ ಆಟೋಗಳ ತಪಾಸಣೆ ಮಾಡಿ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಆಟೋ ಚಾಲಕರು ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ಕೆಲವು ಚಾಲಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಕಡ್ಡಾಯವಾಗಿ ಡಿಸ್ಪ್ಲೇ ಕಾರ್ಡ್ ಅನ್ನು ಆಟೋಗಳಲ್ಲಿ ಹಾಕುವಂತೆ ಎಚ್ಚರಿಕೆ ನೀಡಿದರು.