ETV Bharat / state

ಬರದ ನಾಡಲ್ಲಿ ಮಳೆಯೇ ಅಪರೂಪ, ಅಂಥದ್ರಲ್ಲಿ ಜಲಪಾತಗಳು ಸೃಷ್ಟಿಯಾದ್ರೆ.. - ಮಳೆಗೆ ಕೆರೆ ಕಟ್ಟೆಗಳು ಭರ್ತಿ

ನಿರಂತರ ಬರದಿಂದ ಬೇಸತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಸಣ್ಣಪುಟ್ಟ ಜಲಪಾತಗಳು ಸೃಷ್ಟಿಯಾಗಿವೆ.

ಬರದ ನಾಡಲ್ಲಿ ಸೃಷ್ಟಿಯಾಗಿವೆ ಸಣ್ಣ-ಸಣ್ಣ ಜಲಪಾತಗಳು..!
author img

By

Published : Oct 5, 2019, 8:07 PM IST

ಚಿಕ್ಕಬಳ್ಳಾಪುರ : ಬರದ ನಾಡಲ್ಲಿ ಮಳೆ ನೋಡುವುದೇ ಅಪರೂಪ. ಇದೊಂದು ರೀತಿ ಕಣ್ಣಿಗೆ ಹಬ್ಬವೂ ಹೌದು. ಒಂದೆಡೆ ಮಳೆಯಿಂದ ಕೆರೆ ಕಟ್ಟೆಗಳು ಭರ್ತಿಯಾಗಿದ್ದು ರೈತರಲ್ಲಿ ಹರುಷ ಮೂಡಿಸಿದೆ. ಮತ್ತೊಂದೆಡೆ ಮಳೆಯಿಂದಾಗಿ ಕೆಲವೆಡೆ ಸಣ್ಣ ಸಣ್ಣ ಜಲಪಾತಗಳು ಸೃಷ್ಟಿಯಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಸತತ ಬರದಿಂದ ಕಂಗೆಟ್ಟ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ವರುಣದೇವ ಕೃಪೆ ತೋರಿಸುತ್ತಿದ್ದಾನೆ. ಭಾರೀ ಮಳೆಗೆ ಹಲವೆಡೆ ಕೆರೆ ಕಟ್ಟೆಗಳು ತುಂಬಿವೆ. ಹಾಗಾಗಿ ಸಹಜವಾಗಿಯೇ ಜಿಲ್ಲೆಯ ರೈತರು ಖುಷಿಯಾಗಿದ್ದಾರೆ. ಮಳೆಯಿಂದ ಚಿಕ್ಕಬಳ್ಳಾಪುರದಿಂದ 7 ಕಿಲೋ ಮೀಟರ್ ದೂರದಲ್ಲಿರುವ ತಾಲೂಕಿನ ಕೇತನಹಳ್ಳಿ ಸಮೀಪ ಮಿನಿ ಫಾಲ್ಸ್ ಸೃಷ್ಟಿಯಾಗಿದ್ದು, ನೋಡಲು ನಯನ ಮನೋಹರವಾಗಿದೆ. ಸುತ್ತಮತ್ತಲಿನ ಗ್ರಾಮಸ್ಥರು, ಪ್ರವಾಸಿಗರೆಲ್ಲಾ ಈ ಜಲಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ನೀರು ಹರಿಯುತ್ತಿರುವ ದೃಶ್ಯಗಳನ್ನು ಜನರು ಮೊಬೈಲ್​ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಬರದ ನಾಡಲ್ಲಿ ಸೃಷ್ಟಿಯಾಗಿವೆ ಸಣ್ಣ-ಸಣ್ಣ ಜಲಪಾತಗಳು..!

ಮಳೆಯಿಂದಾಗಿ ಬಾಗೇಪಲ್ಲಿ ತಾಲೂಕಿನಲ್ಲಿಯೂ ಚೆಕ್ ಡ್ಯಾಂಗಳು ಸೇರಿದಂತೆ ಕೆರೆ, ಕಟ್ಟೆಗಳು ತುಂಬಿದ್ದು ಗಡಿಭಾಗದ ಬಯಲುಸೀಮೆ ಜನತೆಗೆ ಜೀವಬಂದಂತಾಗಿದೆ. ತಾಲೂಕಿನ ಗುಡಿಪಲ್ಲಿ ಗ್ರಾಮದ ಬಳಿ ಇರುವ ಜಲಮಡಗು ಜಲಪಾತ ತುಂಬಿ ಹರಿಯುತ್ತಿದೆ. ಅದೇ ರೀತಿ, ಬಾಗೇಪಲ್ಲಿಗೆ ನೀರು ಸರಬರಾಜು ಮಾಡುವ ಚಿತ್ರಾವತಿ ಅಣೆಕಟ್ಟೆಗೆ ನೀರು ಹೆಚ್ಚಾಗಿ ಹರಿಯುತ್ತಿದ್ದು, ಪ್ರಕೃತಿ ಪ್ರಿಯರನ್ನು ಸೆಳೆಯುತ್ತಿದೆ.

Intro:ಬರದನಾಡಿನಲ್ಲಿ ನೀರನ್ನು ನೋಡುವುದೇ ಕಣ್ಣಿಗೆ ಹಬ್ಬವಿದ್ದಂತೆ.ಅಲ್ಪಸ್ವಲ್ಪ ಮಳೆಗೆ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡ ಭಯಲುಸೀಮೆ ರೈತರು ಈ ವರ್ಷದ ಮಳೆರಾಯನ ಕೃಪೆಗೆ ಸಲಾಂ ಹೊಡೆದಿದ್ದಾರೆ.

ಇಷ್ಟಕ್ಕೂ ಯಾಕಪ್ಪ ಮಳೆರಾಯನ ಬಗ್ಗೆ ಪ್ರಸ್ತಾಪ ಅನ್ತೀರಾ.ಇಲ್ಲಿದೆ ನೋಡಿ ಇಂಟ್ರೇಸ್ಟಿಂಗ್ ಸ್ಟೋರಿ..Body:ರಾತ್ರಿಯಷ್ಟೇ ಸುರಿದ ಬಾರೀ ಮಳೆಗೆ ಎತ್ತ ನೋಡಿದರು ಕೆರೆಕುಂಟೆಗಳು,ಹಳ್ಳಗಳು ತುಂಬಿ ರೈತರ ಮೊಗದಲ್ಲಿ ಜೀವಕಳೆ ತುಂಬಿದೆ.ಆದರೆ ಹಲವೆಡೆ ಸಣ್ಣಸಣ್ಣ ಮಿನಿ ಪಾಲ್ಸ್ ಗಳು ಕಾಣಿಸಿಕೊಂಡಿದ್ದು ಪ್ರವಾಸಿಗರನ್ನು ಇತ್ತ ಕೈ ಬೀಸಿಕರೆಯುವಂತಿದೆ.ಸದ್ಯ ನೀವು ನೋಡುತ್ತಿರುವ ದೃಶ್ಯಗಳು ಮಳೆನಾಡಿನ ಪ್ರದೇಶಗಳಂತು ಅಲ್ಲಾ..

ಕಳೆದ 10 ವರ್ಷಗಳಿಂದಲೂ ಬರದನಾಡಾಗಿ ಗುರುತ್ತಿಸಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಸುರಿದ ಬಾರೀ ಮಳೆಗೆ ಹಲವೆಡೆ ಕೆರೆ,ಕೇರಿಗಳು ತುಂಬಿ ತುಳುಕುತ್ತಿದ್ದು ಜಿಲ್ಲೆಯ ರೈತರಿಗೆ ಹಬ್ಬದ ವಾತಾವರಣ ಬಂದಂತಾಗಿದೆ.

ಚಿಕ್ಕಬಳ್ಳಾಪುರದಿಂದ 7 ಕಿಲೋ ಮೀಟರ್ ದೂರದಲ್ಲಿರುವ ತಾಲೂಕಿನ ಕೇತನಹಳ್ಳಿ ಸಮೀಪ ಮಿನಿ ಪಾಲ್ಸ್ ವೊಂದು ಕಾಣಿಸಿಕೊಂಡಿದ್ದು ಗ್ರಾಮದ ಜೊತೆಗೆ ಸುತ್ತಮತ್ತಲಿನ ಗ್ರಾಮ,ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ.ನೀರು ಹರಿಯುತ್ತಿರುವ ದೃಶ್ಯಗಳನ್ನು ಗ್ರಾಮದ ಜನತೆ ಸೇರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ನೋಡಿ ಬನ್ನಿ ನಮ್ಮೂರಾ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನೂ ಬಾಗೇಪಲ್ಲಿ ತಾಲೂಕಿನಲ್ಲಿಯೂ ಬಾರೀ ಮಳೆ ಸುರಿದ್ದಿದ್ದು ಚೆಕ್ ಡ್ಯಾಂಗಳು ಸೇರಿದಂತೆ ಕೆರೆ,ಕಟ್ಟೆಗಳು ತುಂಬಿದ್ದು ಗಡಿಭಾಗದ ಭಯಲುಸೀಮೆ ಜನತೆಗೆ ಜೀವಬಂದಂತಾಗಿದೆ.ತಾಲೂಕಿನ ಗುಡಿಪಲ್ಲಿ ಗ್ರಾಮದ ಬಳಿ ಇರುವ ಜಲಮಡಗು ಜಲಪಾತ ತುಂಬಿ ಹರಿಯುತ್ತಿದೆ.ಅದೇ ರೀತಿ ಬಾಗೇಪಲ್ಲಿಗೆ ನೀರು ಸರಬರಾಜು ಮಾಡುವ ಚಿತ್ರಾವತಿ ಹಣೆಕಟ್ಟಿಗೆ 6 ಅಡಿ ನೀರುತುಂಬಿಕೊಂಡಿದ್ದು ನೋಡಗರನ್ನು ಕೈ ಬೀಸಿ ಕರೆಯುವಂತ್ತಿದೆ.

ಒಟ್ಟಾರೇ ಈ ವರ್ಷದ ವರ್ಷಧಾರೆಗೆ ಜಿಲ್ಲೆಯಲ್ಲಿ ಹಲವು ಪಾಲ್ಸ್ ಗಳು ಕಾಣಿಸಿಕೊಂಡಿದ್ದು ಪ್ರಕೃತಿ ಪ್ರೀಯರ ಸಂತಸದ ಜೊತೆಗೆ,ರೈತರ ಬೆಳೆ, ಧನಕರುಗಳ ಮೇವಿಗೆ ಅಮೃತ ಸಿಕ್ಕಂತಾಗಿದ್ದು,ಜಿಲ್ಲೆಯ ಜನತೆಯ ಜೊತೆಗೆ ಅಧಿಕಾರಿಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ದತ್ತಾತ್ರೇಯ ಚಿಕ್ಕಬಳ್ಳಾಪುರ ಈಟಿವಿ ಭಾರತ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.