ETV Bharat / state

ಗುಡಿಬಂಡೆ: ದ್ವಿಚಕ್ರ ವಾಹನ ಅಡ್ಡಗಟ್ಟಿ ದಂಪತಿಯ ದರೋಡೆ, ದೂರು ದಾಖಲು - Robbery cases of Chikkaballapura

ಸಿ.ಎ.ನರೇಂದ್ರ ಅವರು ತಮ್ಮ ಕುಟುಂಬದೊಂದಿಗೆ ಮನೆಗೆ ಹೋಗುತ್ತಿದ್ದ ಸಂದರ್ಭ ಕಾರಿನಲ್ಲಿ ಬಂದವರು ವಾಹನ ಅಡ್ಡಗಟ್ಟಿ ದುಷ್ಕೃತ್ಯ ಎಸಗಿದ್ದಾರೆ.

robbery-by-crossovering-two-wheeler-complaint-registered
ದ್ವಿಚಕ್ರ ವಾಹನ ಅಡ್ಡಗಟ್ಟಿ ದರೋಡೆ: ದೂರು ದಾಖಲು
author img

By

Published : May 16, 2022, 10:59 AM IST

ಗುಡಿಬಂಡೆ(ಚಿಕ್ಕಬಳ್ಳಾಪುರ): ದಂಪತಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಅಡ್ಡಗಟ್ಟಿದ ದುಷ್ಕರ್ಮಿಗಳು 78 ಗ್ರಾಂ ಚಿನ್ನದ ಮಾಂಗಲ್ಯ ಸರ ಮತ್ತು ನಗದು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣೆಯ ಹಂಪಸಂದ್ರ-ಕಡೇಹಳ್ಳಿ ಕ್ರಾಸ್ ರಸ್ತೆಯಲ್ಲಿ ನಡೆದಿದೆ.

ಘಟನೆಯ ವಿವರ: ಗುಡಿಬಂಡೆ ಪಟ್ಟಣದ ಸಿ.ಎ.ನರೇಂದ್ರ ಮತ್ತು ಪತ್ನಿ ವಾತ್ಸಲ್ಯ ಎ. ಹಾಗೂ ಎರಡು ವರ್ಷದ ಮಗು ಬಾಗೇಪಲ್ಲಿ ಪಟ್ಟಣದ ತಮ್ಮ‌ ಸಂಬಂಧಿಕರ ಮನೆಗೆ ಹೋಗಿದ್ದರು. ಶನಿವಾರ ರಾತ್ರಿ 9 ಗಂಟೆ ಸಮಯದಲ್ಲಿ ಗುಡಿಬಂಡೆಯ ತಮ್ಮ ಮನೆಗೆ ವಾಪಸ್ ಬರುತ್ತಿದ್ದಾಗ ಕಡೇಹಳ್ಳಿ ಕ್ರಾಸ್​ನಲ್ಲಿ ಹಿಂಬದಿಯಿಂದ ವೇಗವಾಗಿ ಬಿಳಿ ಬಣ್ಣದ ಕಾರಿನಲ್ಲಿ 4 ಜನ ದುಷ್ಕರ್ಮಿಗಳು ಬಂದು ದ್ವಿಚಕ್ರ ವಾಹನ ಅಡ್ಡಗಟ್ಟಿದ್ದಾರೆ. ಬಳಿಕ, ಮಾರಕಾಸ್ತ್ರ ತೋರಿಸಿ ಕತ್ತಿನಲ್ಲಿರುವ 78 ಗ್ರಾಂ ತೂಕದ ಮಾಂಗಲ್ಯ ಸರ, 1000 ರೂ. ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರು ಬಾಲ್ಯಸ್ನೇಹಿತರು ಅರೆಸ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.