ಚಿಕ್ಕಬಳ್ಳಾಪುರ: ಮುದುಕನೊಬ್ಬ 8 ವರ್ಷದ ಮೊಮ್ಮಗಳ ಮೇಲೆಯೇ ಅತ್ಯಾಚಾರವೆಸಗಿ ಬೆದರಿಕೆ ಹಾಕಿರುವ ಆರೋಪ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮಾಳಮಾಚನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಬೈರಪ್ಪ ಎಂಬುವವ 8 ವರ್ಷದ ಬಾಲಕಿ ಮೇಲೆ ಈ ಕೃತ್ಯ ನಡೆಸಿದ್ದಾನೆ.
ಕಳೆದ ಸೋಮವಾರ ಶಾಲೆಯಿಂದ ಹಿಂತಿರುಗಿ ಮನೆಗೆ ಬರುವ ವೇಳೆ ಬೈರಪ್ಪ ಮಗುವನ್ನು ಮನೆಯ ಪಕ್ಕದಲ್ಲಿರುವ ಕಂಬಳಿ ತೋಟಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಹಿಂಸಿಸಿರುವುದಾಗಿ ಪೊಲೀಸ್ ಠಾಣೆಯಲ್ಲಿ ಪೊಷಕರು ದೂರು ನೀಡಿದ್ದಾರೆ. ಆರೋಪಿ ಬೈರಪ್ಪ ಮಗುವಿನ ಹತ್ತಿರದ ಸಂಬಂಧಿಯಾದ್ದರಿಂದ ಪೊಷಕರಿಗೆ ಬೆದರಿಕೆ ಹಾಕಿದ್ದನಂತೆ. ಈ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ವಾಪಸ್ ಗ್ರಾಮಕ್ಕೆ ಕರೆತಂದಿದ್ದರು.
ಪೊಲೀಸ್ ದೂರು ಮತ್ತು ಪ್ರಚಾರ ಮಾಡಿದರೆ ಕೊಲ್ಲುವುದಾಗಿ ಪ್ರಾಣ ಬೆದರಿಕೆ ಹಾಕಿದ ಹಿನ್ನೆಲೆ ಮಾತುಕತೆ ನಡೆಸಿ ಮುಚ್ಚಿಹಾಕಲು ಪ್ರಯತ್ನ ನಡೆಸಿದ್ದಾರೆ. ಆದರೆ, ನಂತರ ಪೋಷಕರು ಇಂದು ಕಾನೂನಿನ ಮೊರೆ ಹೋಗಿದ್ದಾರೆ.
ಕಳೆದ ಮಂಗಳವಾರ ತಡ ರಾತ್ರಿ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿ ಬೈರಪ್ಪನನ್ನು ಬಂಧಿಸಿ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.