ಚಿಕ್ಕಬಳ್ಳಾಪುರ: ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರರು ನಡೆಸುತ್ತಿರುವ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದೆ.
ಸುಮಾರು 15 ವರ್ಷಗಳಿಂದ ಸರ್ಕಾರ ಹಾಗು ಆರೋಗ್ಯ ಇಲಾಖೆ ನಮ್ಮ ಬಳಿ ಅವರಿಗೆ ಬೇಕಾದ ಕೆಲಸ ಕಾರ್ಯಗಳನ್ನು ಮಾಡಿಸಿಕೊಂಡಿದ್ದಾರೆ, ನಮ್ಮ ಹಲವಾರು ಬೇಡಿಕೆಗಳನ್ನು ಹಂತ ಹಂತವಾಗಿ ಸರ್ಕಾರಕ್ಕೆ ತಲುಪಿಸುತ್ತಿದ್ದರು ಯಾವುದೇ ರೀತಿಯ ಸಹಕಾರ, ಸ್ಪಂದನೆ ನೀಡಿಲ್ಲ , ಜಿಲ್ಲೆಯಲ್ಲಿ ಹೊರ ಹಾಗು ಒಳ ಗುತ್ತಿಗೆದಾರರು ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದು ಕೊರೊನಾ ಸಮಯದಲ್ಲಿ ಮಾನವೀಯತೆ ದೃಷ್ಠಿಯಿಂದ ಹೋರಾಟ ಮಾಡುತ್ತಿದ್ದರೂ ಸಹ ಸರ್ಕಾರ ನಮ್ಮ ಸಹನೆ, ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಎಂದು ಆರೋಪಿಸಿ ನಮ್ಮ ಬೇಡಿಕೆಗಳನ್ನು ಸ್ವೀಕರಿಸಿ ಶೀಘ್ರ ಈಡೇರಿಸಿವಂತೆ ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಶ್ಯಾಮ್, ಅಜಯ್, ಚಂದ್ರಕಲಾ, ನರಸಿಂಹರೆಡ್ಡಿ, ಮನೋಹರ್, ಸುನಿತಾ, ಪದ್ಮಾ, ಚೌಡರೆಡ್ಡಿ, ಪವಿತ್ರ , ಗಂಗಮ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.