ETV Bharat / state

ಏಕಾಏಕಿ ಉಪನ್ಯಾಸಕರ ಬದಲಾವಣೆ ಹಿನ್ನೆಲೆ: ವಿದ್ಯಾರ್ಥಿಗಳಿಂದ ಆತ್ಮಹತ್ಯೆ ಬೆದರಿಕೆ ಹಾಕಿ ಪ್ರತಿಭಟನೆ‌ - ನಗರಠಾಣೆಯ ಇನ್ಸ್‌ಪೆಕ್ಟರ್ ರಂಗಸ್ವಾಮಯ್ಯ

ಕಾಲೇಜು‌ ಉಪನ್ಯಾಸಕರನ್ನು ಏಕಾಏಕಿ ಬದಲಾವಣೆ ಮಾಡಿದ ಹಿನ್ನೆಲೆ ಇಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿ ವಿಕ್ರಮ್ ಕಾಲೇಜಿನ ಮುಖ್ಯಸ್ಥ ನರಸಿಂಹ ರೆಡ್ಡಿ ಅವರನ್ನು ತರಾಟೆಗೆ ತಗೆದುಕೊಂಡು ಇರುವ ಸಿಬ್ಬಂದಿಯನ್ನು ಎರಡು ವರ್ಷಗಳ‌ ಕಾಲ‌ ಮುಂದುವರೆಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Chikkaballapur
ಚಿಕ್ಕಬಳ್ಳಾಪುರ
author img

By

Published : Dec 15, 2022, 3:33 PM IST

Updated : Dec 15, 2022, 4:35 PM IST

ಬೈರಾರೆಡ್ಡಿ ಶಿಕ್ಷಕ

ಚಿಕ್ಕಬಳ್ಳಾಪುರ: ಕಾಲೇಜು‌ ಉಪನ್ಯಾಸಕರನ್ನು ಏಕಾಏಕಿ ಬದಲಾವಣೆ ಮಾಡಿದ ಹಿನ್ನೆಲೆ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಲೇಜು ಆಡಳಿತ ಮಂಡಳಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ವಿಕ್ರಮ್ ಕಾಲೇಜಿನ ವಿಸ್ಡಮ್ ಅಕಾಡಮಿ ಬಳಿ ನಡೆದಿದೆ. ಅದರಲ್ಲಂತೂ ಓರ್ವ ವಿದ್ಯಾರ್ಥಿ ಕಾಲೇಜು ಮೇಲೆ ಏರಿ ಆತ್ಮಹತ್ಯೆ ಬೆದರಿಕೆ ಹಾಕಿ ಪ್ರತಿಭಟನೆ‌ ನಡೆಸಿದ್ದಾನೆ.

ಕಾಲೇಜಿನ ಮುಖ್ಯಸ್ಥ ಅಶೋಕ್ ರೆಡ್ಡಿ ಕಳೆದ 6 ತಿಂಗಳ‌ ಹಿಂದೆ ಅಪಘಾತದಲ್ಲಿ ಮೃತ ಪಟ್ಟಿದ್ದರು. ಆದರೆ, ಅಕಾಡಮಿ ಜವಬ್ದಾರಿಯನ್ನು ಅಶೋಕ್ ರೆಡ್ಡಿಯ ತಮ್ಮ ಬೈರಾರೆಡ್ಡಿ ಮುಂದುವರೆಸಿಕೊಂಡು ಬರುತ್ತಿದ್ದರು. ಈ ಕಾಲೇಜು ಗುತ್ತಿಗೆ ಆಧಾರದಲ್ಲಿದ್ದು, 10 ವರ್ಷಗಳ ಕಾಲ ಅಕಾಡೆಮಿಯ ಜವಬ್ದಾರಿಯನ್ನು ಅಶೋಕ್ ರೆಡ್ಡಿ ಪಡೆದುಕೊಂಡಿದ್ದರು.

ಆದರೆ, ಅಶೋಕ್ ರೆಡ್ಡಿ ಮೃತ ಪಟ್ಟ ನಂತರ ವಿಕ್ರಮ ಕಾಲೇಜಿನ ಆಡಳಿತ ಮಂಡಳಿ ಏಕಾಏಕಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಶಿಕ್ಷಕರನ್ನು ಬದಲಾವಣೆ ಮಾಡಿರುವುದು ವಿದ್ಯಾರ್ಥಿಗಳ ಹಾಗೂ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಇದೇ ವಿಚಾರವಾಗಿ ವಿದ್ಯಾರ್ಥಿಗಳು ಆಡಳಿತ ಮಂಡಳಿ ಪ್ರಶ್ನಿಸಿದ್ದು, ಆಡಳಿತ ಮಂಡಳಿ ಮಾತ್ರ ಬೇಜವಾಬ್ದಾರಿ ಉತ್ತರ ನೀಡಿ ಮಕ್ಕಳಿಗೆ ಟೀಸಿ ತಗೆದುಕೊಂಡು ಹೋಗುವಂತೆ ಹಾಗೂ ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಚಪ್ಪಲಿ ತೋರಿಸಿ ಪೋಷಕರು ಹಾಗೂ ಮಕ್ಕಳನ್ನು ಮತ್ತಷ್ಟು ಕೆರಳುವಂತೆ ಮಾಡಿದ್ದಾರೆ.

ಇದರ ಹಿನ್ನೆಲೆ ಇಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿ ವಿಕ್ರಮ್ ಕಾಲೇಜಿನ ಮುಖ್ಯಸ್ಥ ನರಸಿಂಹ ರೆಡ್ಡಿ ಅವರನ್ನು ತರಾಟೆಗೆ ತಗೆದುಕೊಂಡು ಇರುವ ಸಿಬ್ಬಂದಿಯನ್ನು ಎರಡು ವರ್ಷಗಳ‌ ಕಾಲ‌ ಮುಂದುವರೆಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ವಿದ್ಯಾರ್ಥಿಯೊಬ್ಬ ಕಾಲೇಜು ಮೇಲ್ಬಾಗವನ್ನ ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ಇದೆಲ್ಲದರಿಂದ ಕೆಲ ಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.

ಇನ್ನು ಸ್ಥಳಕ್ಕೆ ಬಂದ ನಗರಠಾಣೆಯ ಇನ್ಸ್‌ಪೆಕ್ಟರ್ ರಂಗಸ್ವಾಮಯ್ಯ ಸಮಸ್ಯೆ ಬಗೆಹರಿಸಲು‌ ಯಶಸ್ವಿಯಾಗಿದ್ದಾರೆ. ಪೋಷಕರು ಹಾಗೂ ವಿಕ್ರಮ್ ಕಾಲೇಜು ಆಡಳಿತ ಮಂಡಳಿಯ ನಡುವೆ ಮಾತುಕತೆ ನಡೆಸಿ ಎರಡು ವರ್ಷಗಳ‌ ಕಾಲ ಇರುವ ಶಿಕ್ಷಕ ಸಿಬ್ಬಂದಿಯನ್ನೇ ಮುಂದುವರೆಸುವಂತೆ ಒಪ್ಪಿಗೆ ನೀಡಿದ್ದು, ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡಲ್ಲಿ ಇರುವ ಸಿಬ್ಬಂದಿಯನ್ನೇ ಎಲ್ಲ ವರ್ಷಗಳಲ್ಲೂ ಮುಂದುವರೆಸುವುದಾಗಿ ಕಾಲೇಜಿನಲ್ಲಿ‌ ಆಡಳಿತ ಮಂಡಳಿ ಒಪ್ಪಿಗೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಹಾಸ್ಟೆಲ್ ಶೌಚಾಲಯದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

Last Updated : Dec 15, 2022, 4:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.