ಚಿಕ್ಕಬಳ್ಳಾಪುರ: ಇಲ್ಲಿನ ಟಿಪ್ಪುನಗರದಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥಿಸಿ, ಹಜರತ್ ಗೌಸೆ ಪಾಕ್ ನಷಾನ್ನ ಗಂಧೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ನಗರದ ಹಜರತ್ ಮುಸ್ತಫಾ ಷಾ ಖಾದರಿ ಮತ್ತು ಹಜರತ್ ಬಿ .ಬಿ. ಫಾತಿಮಾರವರ ದರ್ಗಾದಿಂದ ಮೆರವಣಿಗೆ ಮೂಲಕ ಹಜರತ್ ಗೌಸೆ ಪಾಕ್ ನಶಾನ ಬಳಿ ಬಂದು ಗಂಧೋತ್ಸವ ಫಾತೆಹಾ ಸಲ್ಲಿಸಲಾಯಿತು. ಫಕೀರರ ಗುರುಗಳಾದ ರೆಹಮಾನ್ ಉಲ್ಲಾ ಶಾ ಅಲಂ ಬರ್ದಾರ್ ರಫಾಯಿ, ಮೂಹಿಯುದ್ದಿನ್ ಶಾ ರಫಾಯಿ, ಮಹಬೂಬ್ ಉಲ್ಲಾ ಶಾ ರಫಾಯಿ ಫಾತೆಹಾ ಕಾರ್ಯಕ್ರಮ ನಡೆಸಿಕೊಟ್ಟು ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಬಾಸಿತ್ ಶಾ ಖಾದರಿ, ಮುಷ್ಠಾಖ್ ಶಾ ಖಾದರಿ, ಸೈಯದ್ ಅಲಿ ಶಾ ಖಾದರಿ, ಸೈಯದ್ ಶಬ್ಬೀರ್ ಖಾದರಿ, ಟೈಲರ್ ಸೈಯದ್ ಪಾಷ, ಅಮ್ಜದ್ ಬೇಗ್ ರಿಜ್ವಾನ್ ಪಾಷ, ಸೇರಿದಂತೆ ಹಲವಾರು ಭಕ್ತರು ಉಪಸ್ಥಿತರಿದ್ದರು.