ಗುಡಿಬಂಡೆ: ಭಾರಿ ಗಾಳಿ ಮಳೆಗೆ 8 ಲಕ್ಷ ಮೌಲ್ಯದ ಪಾಲಿಹೌಸ್ ಸಂಪೂರ್ಣ ನೆಲಸಮಗೊಂಡಿದೆ.
ಸುಮಾರು 1.2 ಲಕ್ಷ ಟೊಮೆಟೊ ಬೆಳೆ ಹಾಗೂ ಇನ್ನಿತರ ಬೆಳೆ ಸರ್ವನಾಶಗೊಂಡಿದ್ದು, ರೈತ ಕಂಗಾಲಾಗಿದ್ದಾರೆ.
ತಾಲೂಕಿನ ತಿರುಮಣಿ ಗ್ರಾಮ ಪಂಚಾಯಿತಿಯ ಸುತ್ತಮುತ್ತ ಭಾರಿ ಗಾಳಿ ಮಳೆಯಿಂದ ಸಾಕಷ್ಟು ಹಾನಿ ಉಂಟಾಗಿದೆ. ತಾಲೂಕಿನ ಬೋಗೇನಹಳ್ಳಿ ಗ್ರಾಮದ ಸರ್ವೆ ನಂ 77/1,2,3ರ ಅಮರನಾರಾಯಣ ಅವರಿಗೆ ಸೇರಿದ ಪಾಲಿಹೌಸ್ ನೆಲಸಮಗೊಂಡಿರುವ ಜತೆಗೆ ಟೊಮೇಟೊ ಸಸಿಗಳು ಸೇರಿದಂತೆ ಇನ್ನಿತರ ಬೆಳೆಗಳು ಸರ್ವನಾಶವಾಗಿದ್ದು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.