ಚಿಕ್ಕಬಳ್ಳಾಪುರ: ದುರಸ್ತಿಗೊಂಡಿದ್ದ ರಸ್ತೆಯೊಂದನ್ನಾ ಪೊಲೀಸರೇ ಇಟ್ಟಿಗೆ, ಸಿಮೆಂಟ್ ಬಳಸಿ ಸರಿಪಡಿಸಿದ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ಜಾಲತಾಣಗಳಲ್ಲಿ ಈ ದೃಶ್ಯಗಳು ವೈರಲ್ ಆಗಿದ್ದು, ಪ್ರಶಂಸೆ ಕೇಳಿಬರುತ್ತಿದೆ. ಇನ್ನೂ ಉಪ ಸಭಾಧ್ಯಕ್ಷರ ಕ್ಷೇತ್ರವಾದ ಚಿಂತಾಮಣಿ ನಗರ ಜಿಲ್ಲೆಗೆ, ಕೋಟ್ಯಂತರ ರೂಪಾಯಿಗಳ ವಹಿವಾಟನ್ನು ತಂದು ಕೊಡುತ್ತಿದೆ. ಆದರೆ ರಸ್ತೆಗಳ ದುರಸ್ತಿಯನ್ನು ಸರಿಪಡಿಸಲು ಮಾತ್ರ ಹಿಂದೇಟು ಹಾಕುತ್ತಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸದ್ಯ ನಗರದ ಚೇಳೂರು ಸರ್ಕಲ್ ಬಳಿ ರಸ್ತೆ ದುರಸ್ಥಿಯಾಗಿ ತಿಂಗಳುಗಳೇ ಕಳೆಯುತ್ತಿದ್ದರು ಯಾವುದೇ ಪ್ರಯೋಜನವಾಗದ ಕಾರಣ ಸ್ವತಃ ಪೊಲೀಸರೇ ರಸ್ತೆಗಿಳಿದು ರಸ್ತೆಯನ್ನು ಸರಿಪಡಿಸಿದ್ದಾರೆ. ಸಿಮೆಂಟ್ ಹಾಗೂ ಇಟ್ಟಿಗೆಗಳನ್ನು ಚೀಲಗಳಲ್ಲಿ ತುಂಬಿಕೊಂಡು ಗುಂಡಿಗಳನ್ನು ಮುಚ್ಚಿ ರಸ್ತೆಯನ್ನು ಸರಿಪಡಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.