ETV Bharat / state

ಚಿಕ್ಕಬಳ್ಳಾಪುರ: ಹೆಣ್ಣೆ ಮಗು ಹುಟ್ಟಿತೆಂದು ದೇವಾಲಯದ ಬಳಿ ಬಿಸಾಡಿ ಹೋದ ಪಾಪಿಗಳು!

ಹೆಣ್ಣು ಮಗು ಹುಟ್ಟಿದರೆ ಸರ್ಕಾರ ಅಂತಹ ಕುಟುಂಬಕ್ಕೆ ಪ್ರೋತ್ಸಾಹ ನೀಡುತ್ತಲೇ ಇದೆ. ಆದರೆ ಹೆಣ್ಣು ಮಗುವನ್ನು ಈಗಲೂ ತಿರಸ್ಕೃತ ಭಾವನೆಯಿಂದ ನೋಡುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಲೇ ಇದೆ.

parent thrown a Baby near temple because of its Girl
ಮಗು ಹೆಣ್ಣೆಂದು ದೇವಾಲಯದ ಬಳಿ ಎಸೆದ ಕ್ರೂರಿಗಳು
author img

By

Published : May 5, 2020, 4:54 PM IST

ಚಿಕ್ಕಬಳ್ಳಾಪುರ: ಹೆಣ್ಣು ಮಗು ಎಂಬ ಕಾರಣಕ್ಕೆ ಹಸುಗೂಸನ್ನು ದೇವಸ್ಥಾನದ ಬಳಿ ಎಸೆದು ಹೋಗಿರುವ ಘಟನೆ ನಡೆದಿದೆ. ಹೆಣ್ಣು ಮಗು ಎಂಬ ಕಾರಣಕ್ಕೆ ಹೆತ್ತ ತಾಯಿಯೇ ಎಸೆದು ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇಲ್ಲಿನ ಗ್ರಾಮಾಂತರ ಠಾಣೆ ವ್ಯಾಪ್ತಿಯ ರಾಮಾಪುರ ಗ್ರಾಮದ ಬಳಿಯ ನದಿ ಪಾತ್ರದಲ್ಲಿರುವ ಅಕ್ಕಮ್ಮ ದೇವಿ ದೇವಾಲಯದ ಬಳಿ ಎಸೆದು ಹೋಗಿದ್ದಾರೆ.

ಬಳಿಕ ಮಗು ಅಳುತ್ತಿರುವ ಸದ್ದು ಕೇಳಿದ ಕುರಿ ಕಾಯುವ ಮಂದಿ, ಆರೋಗ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಆಶಾ ಕಾರ್ಯಕರ್ತೆ ಮಗುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಮಗು ಉಸಿರಾಟದ ತೊಂದರೆಯಿಂದ ಬರುತ್ತಿದ್ದನ್ನು ಗಮನಿಸಿದ ವೈದ್ಯ ರವಿಕುಮಾರ್, ಹೆಚ್ಚಿನ ಚಿಕಿತ್ಸೆಗೆ ಮಗುವನ್ನು ಜಿಲ್ಲಾ ಕೇಂದ್ರಕ್ಕೆ ರವಾನಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.