ಚಿಕ್ಕಬಳ್ಳಾಪುರ: ಜಿಲ್ಲೆಯ ಕಾದಲವೇಣಿ ಕೆರೆಯಲ್ಲಿ ಸುಮಾರು 80ಕ್ಕೂ ಅಧಿಕ ಪಕ್ಷಿಗಳು ಮೃತಪಟ್ಟಿದ್ದು, ಇದರಿಂದ ಹಕ್ಕಿಜ್ವರದ ಭೀತಿ ಹೆಚ್ಚಾಗಿದೆ.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಾದಲವೇಣಿ ಕೆರೆಯಲ್ಲಿ ಇದ್ದಕ್ಕಿದ್ದಂತೆ ಪಕ್ಷಿಗಳು ಸಾವನ್ನಪ್ಪುತ್ತಿದ್ದು, ಗ್ರಾಮಸ್ಥರ ನಿದ್ದೆ ಕೆಡಿಸಿದಂತಾಗಿದೆ. ಕೆರೆಯ ಮಧ್ಯದಲ್ಲಿರುವ ಮರಗಳಲ್ಲಿ ಹಾಗೂ ನೀರಿನಲ್ಲಿ ಪಕ್ಷಿಗಳು ಸತ್ತು ಬಿದ್ದಿವೆ.
ಓದಿ:ಕುಮಟಾದಲ್ಲಿ ಕೊನೆಗೂ ಸಿಕ್ಕ 'ಕರ್ವಾಲೊ' ಕಾದಂಬರಿಯ ನಿಗೂಢ ನಾಯಕ!
ಇನ್ನೂ ಹಲವು ಪಕ್ಷಿಗಳು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದು, ಮರದಲ್ಲೇ ನಿಸ್ಸಹಾಯಕ ಸ್ಥಿತಿಯಲ್ಲಿರುವುದನ್ನು ಕಾಣಬಹುದಾಗಿದೆ. ಸದ್ಯ ಕೊರೊನಾ ಸೋಂಕಿನ ಭಯದಲ್ಲಿರುವ ಗ್ರಾಮಸ್ಥರಿಗೆ ಈಗ ಪಕ್ಷಿಗಳ ಸಾವು ನೋಡಿ ಆತಂಕ ಶುರುವಾಗಿದೆ.