ಚಿಂತಾಮಣಿ : ಸವಾರರ ಸಮಯ ಉಳಿಸಲು ಹಾಗೂ ಮಧ್ಯವರ್ತಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಾಧ್ಯಂತ ಆರ್‌ಟಿಒ ಕಚೇರಿಯಲ್ಲಿ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳುವಂತೆ ಜಿಲ್ಲಾ ಆರ್‌ಟಿಒ ಅಧಿಕಾರಿ ಮಂಜುನಾಥ್ ಇಂದು ನಗರದಲ್ಲಿ ನಡೆದ ಸಕಾಲ ಸಪ್ತಾಹ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದರು.
ಇಂದು ನಗರದ ಸಕಾಲ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್‌ಟಿಒ ಅಧಿಕಾರಿ ಮಂಜುನಾಥ್, ನಾಗರಿಕರ ಅರ್ಜಿಗಳನ್ನು ಸ್ವೀಕರಿಸಿ ಪ್ರಕ್ರಿಯೆ ಸಂಪೂರ್ಣಗೊಳಿಸಲು ಕಾಲಾವಧಿಯನ್ನು ನಿಗದಿ ಪಡಿಸಲಾಗಿದೆ. ಸಕಾಲದಲ್ಲಿ ಯಾವ ಸೇವೆಗಳಿವೆ.
ಯಾವ ಸೇವೆಗಳಿಗೆ ಯಾವ ದಾಖಲೆಗಳನ್ನು ನೀಡಬೇಕು. ನಿಗದಿತ ಅವಧಿ ಎಷ್ಟು ಎಂಬ ಸಂಪೂರ್ಣ ಮಾಹಿತಿ ಪ್ರತಿ ಕಚೇರಿಯ ನಾಮಫಲಕದಲ್ಲಿ ಹಾಗೂ ಅನ್‌ಲೈನ್‌ನಲ್ಲಿ ನೀಡಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸ್ವಿಕರಿಸುವುದರಿಂದ ಆರ್‌ಟಿಒ ಕಚೇರಿಗೆ ಅಲೆದಾಡುವುದು ತಪ್ಪುವುದಲ್ಲದೆ ಭ್ರಷ್ಟಚಾರ ತಡೆಯಲು ಸಹಾಯಕವಾಗಲಿದೆ. ಸಾರ್ವಜನಿಕರ ಸಮಯವು ಸಹ ಪೋಲಾಗದಂತೆ ತಡೆಯಬಹುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಚೇರಿಯ ಅಧೀಕ್ಷಕರಾದ ವೇಣುಗೋಪಾಲ್, ಇನ್ಸ್ ಸ್ಪೆಕ್ಟರ್ ದಿಲೀಪ್ ಕುಮಾರ್, ಕಚೇರಿಯ ಸಿಬ್ಬಂದಿ ಸೇರಿ ಸಾರ್ವಜನಿಕರು ಭಾಗಿಯಾಗಿದ್ದರು.