ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರಿನಲ್ಲಿ ಮತ್ತೊಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲಾಡಳಿತ ಸೇರಿದಂತೆ ಜನರಲ್ಲಿ ಆತಂಕ ಮೂಡಿಸಿದೆ.
ದೆಹಲಿಗೆ ಹೋಗಿ ಬಂದಿದ್ದ 23 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ. ಗೌರಿಬಿದನೂರಿನಲ್ಲಿ ಹೋಂ ಕ್ವಾರಂಟೈನ್ನಲ್ಲಿದ್ದ ಯುವಕನನ್ನು ಜಿಲ್ಲಾಸ್ಪತ್ರೆಯ ಐಸೊಲೇಷನ್ ವಾರ್ಡ್ಗೆ ರವಾನಿಸಲಾಗಿದೆ.
ದೆಹಲಿ ನಂಟು ಹೊಂದಿದ್ದ 41 ಮಂದಿ ಶಂಕಿತರು ಹಾಗೂ ಹಿಂದೂಪುರ ವೈದ್ಯನ ಸಂಪರ್ಕದಲ್ಲಿದ್ದ 4 ಶಂಕಿತರ ವರದಿ ಸೇರಿದಂತೆ ಒಟ್ಟು 45 ಮಂದಿ ಶಂಕಿತರ ವರದಿ ಬರುವುದು ಬಾಕಿ ಇದೆ.