ಚಿಕ್ಕಬಳ್ಳಾಪುರ : ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಪ್ರತಿಭಟನೆಗೆ ಸಿದ್ದವಾಗಿದ್ದ ಎನ್ಎಸ್‌ಯುಐ ಕಾರ್ಯಕರ್ತರನ್ನು ಸಚಿವರು ಬರುವುದಕ್ಕೂ ಮುನ್ನವೇ ಪೊಲೀಸರು ಬಂಧಿಸಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ.
ಪೆಟ್ರೋಲ್ ಬೆಲೆ ಏರಿಕೆ ಹಿನ್ನೆಲೆ ಸಚಿವ ಸುರೇಶ್ ಕುಮಾರ್ಗೆ ಶಿಡ್ಲಘಟ್ಟದಲ್ಲಿ ಪ್ರತಿಭಟನೆ ಬಿಸಿ ಮುಟ್ಟಿಸಲು ಮುಂದಾಗಿದ್ದ ಎನ್.ಎಸ್.ಯು.ಐ ಕಾರ್ಯಕರ್ತರನ್ನು ಇಂದು ಮುಂಜಾನೆ 4:30 ರ ಸುಮಾರಿಗೆ ಬಂಧಿಸಿ ಪೊಲೀಸ್ ಠಾಣೆಗೆ ಕರೆದಕೊಂಡು ಹೋಗಿದ್ದಾರೆ.
ಎನ್ಎಸ್‌ಯುಐ ರಾಜ್ಯ ಸಂಚಾಲಕ ಕುದಲಗುರ್ಕಿ ಮುನೇಂದ್ರ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಶಿಡ್ಲಘಟ್ಟ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಿದ್ದರಾಗಿದ್ದರು. ಇನ್ನು ಇದನ್ನ ಅರಿತ ಬಿಜೆಪಿ ಕಾರ್ಯಕರ್ತರು ಸಚಿವರಿಗೆ ಮಾಹಿತಿ ಮುಟ್ಟಿಸಿ ಸಚಿವರು ಬರುವ ಮೊದಲೇ ಬಂಧಿಸಿ ಪ್ರತಿಭಟನೆ ತಡೆದಿದ್ದಾರೆ ಎನ್ನಲಾಗಿದೆ.