ETV Bharat / state

ಮೋದಿ‌ ರೋಡ್ ಶೋ‌ದಿಂದ ಯಾವುದೇ ಪ್ರಯೋಜನವಿಲ್ಲ: ಹೆಚ್​.ಡಿ.ದೇವೇಗೌಡ

ಇದು ಪಾರ್ಲಿಮೆಂಟ್ ಚುನಾವಣೆಯಲ್ಲ. ರೋಡ್ ಶೋ ಮಾಡಿ ಜನರನ್ನು ಮರುಳು ಮಾಡುವುದಕ್ಕೆ ಸಾಧ್ಯವಾಗದು ಎಂದು ಹೆಚ್​.ಡಿ.ದೇವೇಗೌಡ ಹೇಳಿದರು.

HD Devegowda
ಹೆಚ್​.ಡಿ ದೇವೇಗೌಡ
author img

By

Published : May 7, 2023, 12:50 PM IST

ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಹೆಚ್​.ಡಿ.ದೇವೇಗೌಡ

ಚಿಕ್ಕಬಳ್ಳಾಪುರ: ಕರ್ನಾಟಕದಲ್ಲಿ ಬಿಜೆಪಿ ಶಕ್ತಿ ಕುಂದಿದೆ. ಪ್ರಧಾನಿ ಮೋದಿ ಬಂದು ಎರಡೆರಡು ದಿನ ರೋಡ್ ಶೋ ಮಾಡುತ್ತಿದ್ದಾರೆ. ಇದು ಪಾರ್ಲಿಮೆಂಟ್ ಚುನಾವಣೆಯಲ್ಲ. ರೋಡ್ ಶೋ ಮಾಡಿ ಜನರನ್ನು ಮರುಳು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದರು.

ಶಿಡ್ಲಘಟ್ಟ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಮೇಲೂರು ಬಿ.ಎನ್.ರವಿಕುಮಾರ್ ಆಯೋಜಿಸಿದ್ದ ಬೃಹತ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು 18 ಜನ ಎಂಎಲ್​​ಎಗಳನ್ನು ಮುಂಬೈಗೆ ಕಳುಹಿಸಿ ಕೊಟ್ಟವರು ಯಾರು ಎಂದು ಜನರಿಗೆ ಸತ್ಯ ಹೇಳಿ. ಬಿಜೆಪಿ ಸರ್ಕಾರದಲ್ಲಿ ಒಬ್ಬರೇ ಒಬ್ಬರೂ ಸಹ ಮುಸ್ಲಿಂ ಮಂತ್ರಿಯಾಗಿಲ್ಲ. ನಾವೆಲ್ಲ ಭಾರತಾಂಬೆಯ ಮಕ್ಕಳು. ಆದರೆ ಬಿಜೆಪಿಯವರು ಯಾಕೆ ಈ ತಾರತಮ್ಯ ಮಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಪ್ರಶ್ನಿಸಿದರು.

"ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿ ರವಿ ಸೋಲುತ್ತಾನೆಂದು ನಾನು ಕನಸು ಮನಸಿನಲ್ಲಿಯೂ ಯೋಚನೆ ಮಾಡಿರಲಿಲ್ಲ. ರವಿ ಖಬರಸ್ತಾನಕ್ಕೆ 4 ಎಕರೆ ಭೂಮಿಯನ್ನು ಕೊಡದಂತೆ ತಡೆದಿದ್ದು ತುಂಬಾ ನೋವಿನ ಸಂಗತಿ. ಈದ್ಗಾ ಮೈದಾನ, ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ, ನೀರಾವರಿ ಯೋಜನೆ ಹೀಗೆ ಅನೇಕ ಕೆಲಸಗಳನ್ನು ಮಾಡಿದ್ದೇನೆ. ನಾವೆಲ್ಲ ಒಂದೇ ತಾಯಿಯ ಮಕ್ಕಳು. ಮತ್ತೊಮ್ಮೆ ಚುನಾವಣೆಗೆ ನಿಲ್ಲುವುದಕ್ಕೆ ರವಿಗೆ ಇಷ್ಟ ಇರಲಿಲ್ಲ. ನಾವು ಒತ್ತಾಯ ಮಾಡಿ ಅವರನ್ನು ನಿಲ್ಲಿಸಿದ್ದೇವೆ. ಈ ಬಾರಿ ರವಿ ಶಾಸಕನಾಗಬೇಕು. ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ನೋಡಬೇಕೆಂದು ಕಾದಿದ್ದೇನೆ" ಎಂದರು.

ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ: ವಿಡಿಯೋ

ಹೆಚ್​ಡಿಕೆ ವಾಗ್ದಾಳಿ: ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ ರೋಡ್ ಶೋದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಜನರಿಗೆ ತೊಂದರೆ ಕೊಟ್ಟು ಪ್ರಧಾನ ಮಂತ್ರಿ ನರೇಂದ್ರ ಮೋದಿ ರೋಡ್ ಶೋ ನಡೆಸುತ್ತಿದ್ದಾರೆ. ಮೋದಿ ರೋಡ್ ಶೋದಿಂದ ದುಡಿಯುವ ಜನ ಬೀದಿ ಪಾಲಾಗುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ಈ ರ‍್ಯಾಲಿ ಮಾಡ್ತಿದ್ದಾರೆ?. ಇದು ನಾಳೆ ನೀಟ್ ಪರೀಕ್ಷೆ ಬರೆಯುವ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮೋದಿ ರೋಡ್ ಶೋಯಿಂದ ಜನರಿಗೆ ತೊಂದರೆಯಾಗಿದೆ - ಸಿದ್ದು ಬಳಿ ಸಿದ್ಧಾಂತ‌ ಕಲಿಯಬೇಕಿಲ್ಲ? : ಹೆಚ್​ಡಿಕೆ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.