ಚಿಕ್ಕಬಳ್ಳಾಪುರ: ಮದ್ಯಪ್ರಿಯರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಶಾಕ್ ನೀಡಿದ್ದು, ಮದ್ಯದಂಗಡಿಗಳು ತೆರಯದಂತೆ ಆದೇಶ ಹೊರಡಿಸಲಾಗಿದೆ.
ಗೌರಿಬಿದನೂರು ನಗರಾದ್ಯಂತ ನಿನ್ನೆಯಿಂದಲೇ ಅಂಗಡಿಗಳ ಮುಂದೆ ಬ್ಯಾರಿಕೇಡ್ ಹಾಕುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಿ ವೈನ್ ಶಾಪ್ ತೆರೆಯಲು ಸಿದ್ಧತೆ ಮಾಡಲಾಗಿತ್ತು. ಆದರೆ,ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಗರಗಳಲ್ಲಿ ಮದ್ಯದಂಗಡಿಗಳು ತೆರಯದಂತೆ ಆದೇಶ ಹೊರಡಿಸಿದ್ದು, ಮದ್ಯಪ್ರಿಯರು ನಿರಾಸೆಗೊಂಡಿದ್ದಾರೆ.
ನಗರದಲ್ಲಿ ಮದ್ಯದಂಗಡಿಗಳು ಓಪನ್ ಮಾಡದಿರಲು ಆದೇಶಿಸಲಾಗಿದ್ದು, ಗ್ರಾಮಾಂತರ ಭಾಗದಲ್ಲಿ MRP ಹಾಗೂ ವೈನ್ ಶಾಪ್ಗಳು ತೆಗೆಯಲು ಅನುಮತಿ ನೀಡಲಾಗಿದೆ.