ಚಿಕ್ಕಬಳ್ಳಾಪುರ: ಹೊಸ ವರ್ಷದ ಆಚರಣೆಗೆ ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಬಿಗ್ ಶಾಕ್ ನೀಡಿದೆ. ಡಿಸೆಂಬರ್ 31ರ ಸಂಜೆ 4ರಿಂದ ಜನವರಿ 1ರ ಬೆಳಿಗ್ಗೆ 8 ಗಂಟೆವರೆಗೂ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ.
![No entry to Nandi Hills on new year](https://etvbharatimages.akamaized.net/etvbharat/prod-images/5539525_jays.jpg)
ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ ಆದೇಶ ಹೊರಡಿಸಿದ್ದಾರೆ. ನಂದಿ ಬೆಟ್ಟ ಪರಿಸರ ಪ್ರೇಮಿಗಳು ಸೇರಿದಂತೆ ಪ್ರೇಮ ಪಕ್ಷಿಗಳಿಗೆ ಫೇವರೇಟ್ ಸ್ಪಾಟ್. ಇದರ ಸಲುವಾಗಿಯೇ ಸಾವಿರಾರು ಸಂಖ್ಯೆಯಲ್ಲಿ ಜನರು ನಂದಿ ಬೆಟ್ಟದ ಪ್ರಕೃತಿ ಸವಿಯಲು ಬರುತ್ತಾರೆ. ಇನ್ನು ವರ್ಷದ ಮೊದಲ ದಿನ ಸಾಕಷ್ಟು ಪ್ರಾವಾಸಿಗರು ನಂದಿ ಬೆಟ್ಟದ ಮೇಲೆ ಎಂಜಾಯ್ ಮಾಡಲು ಪ್ಲಾನ್ ಮಾಡಿಕೊಂಡಿರುತ್ತಾರೆ. ಆದರೆ ಹೊಸ ವರ್ಷದ ಆಚರಣೆಗೆ ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಜಿಲ್ಲಾಡಳಿತ ನಿರಾಸೆ ಮೂಡಿಸಿದೆ.
ಡೆಸೆಂಬರ್ 31ರ ಸಂಜೆ 4ರಿಂದ ಜನವರಿ 1ರ ಬೆಳಿಗ್ಗೆ 8 ಗಂಟೆವರೆಗೂ ಪ್ರವಾಸಿಗರಿಗೆ ಬೆಟ್ಟಕ್ಕೆ ತೆರಳಲು ಅನುಮತಿ ಇಲ್ಲ. ಆದರೆ ವರ್ಷದ ಮೊದಲನೇ ದಿನ 8 ಗಂಟೆಯ ನಂತರ ಬರುವ ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಚಿಕ್ಕಬಳ್ಳಾಪುರ ಎಸ್ಪಿ ಅಭಿನವ ಖರೆ ಈಟಿವಿ ಭಾರತ್‌ಗೆ ಸ್ಪಷ್ಟಪಡಿಸಿದ್ದಾರೆ.