ETV Bharat / state

ಮರ್ಮಾಂಗ ಕತ್ತರಿಸಿ ಯುವಕನ ಬರ್ಬರ ಕೊಲೆ.. ಕಾರಣ ನಿಗೂಢ - ಚಿಕ್ಕಬಳ್ಳಾಪುರದಲ್ಲಿ ಮರ್ಮಾಂಗ ಕತ್ತರಿಸಿ ಯುವಕನ ಬರ್ಬರ ಕೊಲೆ

ಜಿಲ್ಲೆಯ ಗೌರಿಬಿದನೂರು ನಗರ ವ್ಯಾಪ್ತಿಯಲ್ಲಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Murder of a young man in Chikkaballapur
ಮರ್ಮಾಂಗ ಕತ್ತರಿಸಿ ಯುವಕನ ಬರ್ಬರ ಕೊಲೆ
author img

By

Published : Jan 4, 2021, 12:24 PM IST

Updated : Jan 4, 2021, 1:57 PM IST

ಚಿಕ್ಕಬಳ್ಳಾಪುರ: ಚಾಕುವಿನಿಂದ ವ್ಯಕ್ತಿಯ ಮರ್ಮಾಂಗ ಸೇರಿದಂತೆ ದೇಹದ 20 ಕ್ಕೂ ಹೆಚ್ಚು ಭಾಗಗಳಲ್ಲಿ ಚುಚ್ಚಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಗೌರಿಬಿದನೂರು ನಗರ ಠಾಣಾ ವ್ಯಾಪ್ತಿಯ ದರ್ಗಾ ಬಳಿಯ ಹೊಲದಲ್ಲಿ ನಡೆದಿದೆ.

ಮರ್ಮಾಂಗ ಕತ್ತರಿಸಿ ಯುವಕನ ಬರ್ಬರ ಕೊಲೆ

ಮೃತ ಯುವಕನನ್ನು ನಗರದ ಶರೀಫ್ ಎಂಬುವವರ ಮಗ ಇಮ್ರಾನ್ ಖಾನ್ (25) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಪಟ್ಟಣದ ಟಿಪ್ಪು ನಗರ ನಿವಾಸಿಯಾಗಿದ್ದು, ಕೆಎಸ್​​ಆರ್​ಟಿಸಿ ಡಿಪೋ ಬಳಿ ವೆಲ್ಡಿಂಗ್ ಶಾಪ್ ಅಂಗಡಿ ನಡೆಸುತ್ತಿದ್ದ ಎನ್ನಲಾಗಿದೆ.

ಸದ್ಯ ಕೊಲೆಗೆ ನಿಖರ ಕಾರಣ ತಿಳಿದಿಲ್ಲ. ಸ್ಥಳಕ್ಕೆ ಸಿಪಿಐ ರವಿ ಹಾಗೂ ಪಿಎಸ್​ಐ ಪ್ರಸನ್ನ ಕುಮಾರ ಹಾಗೂ ಚಂದ್ರಕಲಾ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

ಓದಿ : ಯುವತಿಯರನ್ನು ಚುಡಾಯಿಸುತ್ತಿದ್ದ ರೋಡ್ ರೋಮಿಯೋಗೆ ಬಿತ್ತು ಗೂಸಾ..ವಿಡಿಯೋ ವೈರಲ್

Last Updated : Jan 4, 2021, 1:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.