ಚಿಕ್ಕಬಳ್ಳಾಪುರ : ಬೂಸಾ ವ್ಯಾಪಾರಿಯನ್ನು ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಬಳಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಐಬಸಾಪುರದ ನಿವಾಸಿ ನಿರಂಜನ್ ಮೂರ್ತಿ (52) ಕೊಲೆಯಾದ ವ್ಯಕ್ತಿ. ಬೂಸಾ ವ್ಯಾಪಾರ ಮಾಡುತ್ತಿದ್ದ ನಿರಂಜನ್ ಮೂರ್ತಿ, ವ್ಯಾಪಾರ ಮುಗಿಸಿಕೊಂಡು ರಾತ್ರಿ ಮನೆಗೆ ಹೋಗುವ ವೇಳೆ ಜಂಗಮಕೋಟೆ ಹೊರ ಠಾಣೆಯ ಸಮೀಪ ಹೊಸಕೋಟೆ ರಸ್ತೆಯಲ್ಲಿ ಕೊಲೆ ಮಾಡಲಾಗಿದೆ ತಿಳಿದು ಬಂದಿದೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.