ಚಿಕ್ಕಬಳ್ಳಾಪುರ: ಕಳ್ಳತನ ಮಾಡಿರುವ ವಸ್ತುಗಳ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿದ್ದು, ಚಾಕುವಿನಿಂದ ಕತ್ತಿಗೆಗೆ ಇರಿದು ಸ್ನೇಹಿತನ ಬರ್ಬರ ಕೊಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆದ ಘಟನೆ ಜಿಲ್ಲೆಯ ನೂತನ ತಾಲೂಕು ಚೇಳೂರುನಲ್ಲಿ ನಡೆದಿದೆ. ನಾಸಿರ್ (24) ಕೊಲೆಯಾದ ಯುವಕನಾಗಿದ್ದಾನೆ. ಚೇಳೂರು ನಿವಾಸಿ ಸೋನು (ಸಯೈದ್)(20) ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ನಾಸೀರ್ ಹಾಗೂ ಸಯೈದ್ ಇಬ್ಬರು ಸ್ನೇಹಿತರಾಗಿದ್ದರು. ಇನ್ನೂ ಕಳೆದ ತಿಂಗಳುಗಳ ಹಿಂದೆ ಆಂಧ್ರಪ್ರದೇಶದ ತಿರುಪತಿಯ ಅಲಿಪಿರಿ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಂಧಿತರಾಗಿದ್ದರು. ಆದರೆ, ಸಯೈದ್ ಪೋಷಕರು ಬೇಲ್ ಮೇಲೆ ಬಿಡುಗಡೆ ಮಾಡಿಕೊಂಡು ಬಂದಿದ್ದರು. ನಾಸಿರ್ ಅನಾಥವಾದ ಹಿನ್ನೆಲೆ ಬೇಲ್ ಸಿಗದೇ ಜೈಲಿನಲ್ಲೇ ಉಳಿದು ಕೊಂಡಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೇ ಗಲಾಟೆಯೂ ನಡೆದಿತ್ತು.
ಆದರೆ ಕಳೆದ ದಿನದ ರಾತ್ರಿ ಚೇಳೂರಿನ ಕಬೀರ್ ಕಾಲೋನಿಯ ಸಯೈದ್ ಮನೆಯಲ್ಲಿ ಇನಾಯತ್ ಎಂಬ ಮತ್ತೋರ್ವ ಸ್ನೇಹಿತ ಕಳ್ಳತನ ಮಾಡಿರುವ ಆರೋಪ ಕೇಳಿ ಬಂದಿದೆ. ಇನ್ನೂ ಮನೆಯಲ್ಲಿದ್ದ ವಸ್ತುಗಳನ್ನು ನಾಸೀರ್ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ ಎಂದು ಆರೋಪಿಸಿ, ಸೈಯದ್ ನಾಸೀರ್ಗೆ ಕತ್ತಿನ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಇನ್ನೂ ಘಟನಾ ಸ್ಥಳಕ್ಕೆ ಚೇಳೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಸೋನು (ಸಯೈದ್) ತಂದೆ - ಬಾಬು ಹಾಗೂ ತಾಯಿ-ಸಲ್ಮಾ ರವರನ್ನು ಪೊಲೀಸರು ವಶ ಪಡಿಸಿಕೊಂಡು ಪರಾರಿಯಾದ ಸೋನುನನ್ನು ಪೊಲೀಸರು ಕಾರ್ಯಾಚರಣೆ ಮಾಡಿ ರಾತ್ರಿ 3 ಗಂಟೆಗೆ ವಶಕ್ಕೆ ಪಡೆದರು.
ಇದನ್ನೂ ಓದಿ: ಚಿತ್ರದುರ್ಗ: ಮನೆಯಲ್ಲಿ ವೃದ್ಧ ದಂಪತಿಯ ಬರ್ಬರ ಹತ್ಯೆ