ETV Bharat / state

ಶಾಲೆ ಮುಂದೆಯೇ ಕೊಳಚೆ ಗುಂಡಿ, ಸೊಳ್ಳೆಗಳ ಕಾಟ,, ಈ ಮಕ್ಕಳ ಸ್ಥಿತಿ ಶಿವಶಿವ..!! - ರೇಷ್ಮೆ ನಗರಿ ಶಿಡ್ಲಘಟ್ಟ

ಚಿಕ್ಕಬಳ್ಳಾಪುರ ಜಿಲ್ಲೆಯ ರೇಷ್ಮೆ ನಗರಿ ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ-ಚಿಕ್ಕದಾಸರಹಳ್ಳಿ ಮಾರ್ಗ ಮಧ್ಯೆ ಇರುವ ಮುಗಳಡಪಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿರುವ ತಗ್ಗು ಪ್ರದೇಶದಲ್ಲಿ ನೀರು ನಿಂತು ಮಕ್ಕಳು, ಮೈ ಕೈ ಕೆಸರು ಮಾಡಿಕೊಂಡು ಶಾಲೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲೆ ಮುಂದೆಯೇ ಕೊಳಚೆ ಗುಂಡಿ, ಸೊಳ್ಳೆಗಳ ಕಾಟ,,,ಮುಗಳಡಪಿ ಶಾಲೆ ಮಕ್ಕಳ ಪರಿಸ್ಥಿತಿ...!!
author img

By

Published : Oct 11, 2019, 11:40 PM IST

ಚಿಕ್ಕಬಳ್ಳಾಪುರ : ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದರೂ ಶಾಲೆಗಳ ಅಭಿವೃದ್ಧಿ ಮಾತ್ರ ಕುಂಠಿತಗೊಳ್ಳುತ್ತಿದೆ‌. ಕೈ ಮುಗಿದು ಶಾಲೆಗೆ ಹೋಗಬೇಕಾದ ಮಕ್ಕಳು, ಮೈ ಕೈ ಕೆಸರು ಮಾಡಿಕೊಂಡು ಶಾಲೆಗೆ ಹೋಗುವಂತಹ ಪರಿಸ್ಥಿತಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಂಡು ಬಂದಿದೆ.

ಶಾಲೆ ಮುಂದೆಯೇ ಕೊಳಚೆ ಗುಂಡಿ, ಸೊಳ್ಳೆಗಳ ಕಾಟ,, ಮುಗಲಡಪಿ ಶಾಲೆ ಮಕ್ಕಳ ಪರಿಸ್ಥಿತಿ...!!

ಜಿಲ್ಲೆಯ ರೇಷ್ಮೆ ನಗರಿ ಶಿಡ್ಲಘಟ್ಟ ತಾಲೂಕಿನ ಮಳಮಾಚನಹಳ್ಳಿ-ಚಿಕ್ಕದಾಸರಹಳ್ಳಿ ಮಾರ್ಗ ಮಧ್ಯೆ ಇರುವ ಮುಗಲಡಪಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಪರಿಸ್ಥಿತಿಯನ್ನು ನೋಡಿದರೆ ಸಾಕಪ್ಪ ಸರ್ಕಾರಿ ಶಾಲೆಗಳ ಸಹವಾಸ ಎನ್ನುವುದಂತು ನಿಜ.

ಮುಗಳಡಪಿ ಚಿಕ್ಕ ಹಳ್ಳಿಯಾದ್ರೂ ಶಾಲೆಯಲ್ಲಿ ಮಾತ್ರ 23 ಮಕ್ಕಳು ಪಾಠವನ್ನು ಕಲಿಯುತ್ತಿದ್ದಾರೆ. ಆದರೆ ಮಳೆಗಾಲ ಬಂತಂದ್ರೆ ಸಾಕು ಶಾಲೆಗೆ ಬರಲು ಮಕ್ಕಳು ಹಾಗೂ ಶಾಲೆಗೆ ಕಳುಹಿಸಲು ಪೋಷಕರು ಭಯಪಡುವಂತಾಗಿದೆ.

ಮಳೆಯಿಂದಾಗಿ ಶಾಲೆಯ ಮುಂಭಾಗದಲ್ಲಿರುವ ತಗ್ಗು ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಆ ಗೊಚ್ಚೆ ಗುಂಡಿಯನ್ನು ದಾಟಿಕೊಂಡು ಶಾಲೆಗೆ ಪ್ರವೇಶಿಸಬೇಕಾದ್ರೆ ಮಕ್ಕಳ ಬಟ್ಟೆಯೆಲ್ಲಾ ಕೊಳೆಯಾಗುತ್ತದೆ. ಅಷ್ಟೇಅಲ್ಲದೆ, ಆ ಕೊಳಚೆ ನೀರಿನಲ್ಲಿ ಸೊಳ್ಳೆಗಳ ಸಂತತಿ ಹೆಚ್ಚುತ್ತಿದ್ದು, ಸೊಳ್ಳೆ ಕಾಟವು ಮಕ್ಕಳ ಪಾಠ ಪ್ರವಚನೆಗಳಿಗೆ ದೊಡ್ಡ ಸಮಸ್ಯೆಯಾಗಿದೆ.

ಇನ್ನು, ಶಾಲೆಯ ಮಕ್ಕಳು ಕೂಡ ಅದೇ ನೀರಿನಲ್ಲಿ ಆಟವಾಡುತ್ತಿದ್ದು, ರೋಗಗಳು ಹರಡುವ ಭೀತಿಯೂ ಹೆಚ್ಚಾಗಿದೆ. ಆದರೆ, ಇದನ್ನೆಲ್ಲ ನೋಡುತ್ತಿರುವ ಅಧಿಕಾರಿಗಳು ಮಾತ್ರ ಜಾಣಕುರುಡುತನ ತೋರುತ್ತಿದ್ದಾರೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕಾಗಿದೆ.

Intro:Body:ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದರು ಶಾಲೆಗಳ ಅಭಿವೃದ್ಧಿ ಮಾತ್ರ ಕುಂಠಿತಗೊಳ್ಳುತ್ತಿದೆ‌. ಜ್ಞಾನ ದೆಗುಲವಿದು ಕೈ ಮುಗಿದು ಒಳಗೆ ಬಾ ಎಂದು ಶಾಲೆಗೆ ಹೋಗಬೇಕಾದ ಮಕ್ಕಳು, ಮೈ ಕೈ ಕೆಸರು ಮಾಡಿಕೊಂಡು ಶಾಲೆಗೆ ಹೋಗುವಂತಹ ಪರಿಸ್ಥಿತಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಂಡು ಬಂದಿದೆ.ಇಷ್ಟಕ್ಕೂ ಯಾವುದಪ್ಪಾ ಆ ಶಾಲೆ ಅಂತೀರಾ ಇಲ್ಲಿದೆ ನೋಡಿ ಆ ಸ್ಟೋರಿ...

ಜಿಲ್ಲೆಯ ರೇಷ್ಮೆ ನಗರಿ ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ-ಚಿಕ್ಕದಾಸರಹಳ್ಳಿ ಮಾರ್ಗ ಮಧ್ಯೆ ಇರುವ ಮುಗಳಡಪಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಪರಿಸ್ಥಿತಿಯನ್ನು ನೋಡಿದರೆ ಸಾಕಪ್ಪ ಸರ್ಕಾರಿ ಶಾಲೆಗಳ ಸಹವಾಸ ಎನ್ನುವುದಂತು ಗ್ಯಾರೆಂಟಿ.

ಚಿಕ್ಕಹಳ್ಳಿಯಾದ್ರು ಶಾಲೆಯಲ್ಲಿ ಮಾತ್ರ 23 ಮಕ್ಕಳು ಪಾಠವನ್ನು ಕಲಿಯುತ್ತಿದ್ದಾರೆ.ಆದರೆ ಮಳೆಗಾಲ ಬಂತಂದ್ರೆ ಸಾಕು ಶಾಲೆಗೆ ಬರಲು ಮಕ್ಕಳು ಹಾಗೂ ಶಾಲೆಗೆ ಕಳುಹಿಸಿಲು ಪೊಷಕರು ಭಯಪಡುವಂತಾಗಿದೆ.

ಶಾಲೆಯ ಮುಂಭಾಗದಲ್ಲಿರುವ ಮಿನಿ ಕುಂಟೆಯನ್ನು ದಾಟಿಕೊಂಡು ಶಾಲೆಗೆ ಪ್ರವೇಶಿಸಬೇಕಾದ್ರೆ ಮಕ್ಕಳ ಬಟ್ಟೆಗಳೆಲ್ಲಾ ಕೊಳ್ಳೆಯಾಗುವುರಲ್ಲಿ ಬೇರೊಂದು ಮಾತಿಲ್ಲಾ., ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಶಾಲೆಯ ಮುಂಭಾಗವು ಚಿಕ್ಕ ಕುಂಟೆ ನಿರ್ಮಾಣವಾಗಿದ್ದು ಸೊಳ್ಳೆಗಳ ಕಾಟವು ಎಚ್ಚಾಗಿದ್ದು ಮಕ್ಕಳ ಪಾಠ ಪ್ರವಚನೆಗಳಿಗೆ ದೊಡ್ಡ ಸಮಸ್ಯೆಯಾದಂತಿದೆ.

ಸದ್ಯ ಶಾಲೆಯ ಮಕ್ಕಳು ಅದೇ ನೀರಿನಲ್ಲಿ ಆಟವಾಡುತ್ತಿದ್ದು ರೋಗಗಳು ಹರಡುವ ಭೀತಿಯೂ ಹೆಚ್ಚಾಗಿದೆ. ಆದರೆ ಅಧಿಕಾರಿಗಳು ಮಾತ್ರ ಕೈಕಟ್ಟಿ ಕುಳಿತ್ತಿದ್ದು ಮಕ್ಕಳ ಭವಿಷ್ಯದ ನಡುವೆ ಆಟವಾಡುತ್ತಿದ್ದಾರೆ.

ದತ್ತಾತ್ರೇಯ ಈಟಿವಿ ಭಾರತ ಚಿಕ್ಕಬಳ್ಳಾಪುರ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.