ಚಿಕ್ಕಬಳ್ಳಾಪುರ : ಹಂಪಸಂದ್ರ ಪಂಚಾಯಿತಿ ಮುಂದೆ ತಾಯಿ-ಮಗಳು ನಿವೇಶನ ನೀಡುವಂತೆ ಅರ್ಜಿ ಹಿಡಿದು ಕುಳಿತ್ತಿದ್ದು, ಯಾವೊಬ್ಬ ಅಧಿಕಾರಿಯೂ ಇದಕ್ಕೆ ಪ್ರತಿಕ್ರಿಯೆ ನೀಡುತ್ತಿಲ್ಲವೆಂದು ದೂರು ಕೇಳಿ ಬಂದಿದೆ.
ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಪಂಚಾಯಿತಿ ಅಂಜಿನಮ್ಮ ತನ್ನ ಮಗಳೊಂದಿಗೆ ನಿವೇಶನಕ್ಕಾಗಿ ಅರ್ಜಿ ಹಿಡಿದು ಕುಳಿತ್ತಿದ್ದು, ಯಾವೊಬ್ಬ ಅಧಿಕಾರಿಯೂ ಕರುಣೆ ತೋರುತ್ತಿಲ್ಲ.
ಸ್ಥಳೀಯ ಶಾಸಕರಾದ ಸುಬ್ಬರೆಡ್ಡಿಯವರು ನೀವು ಹಂಪಸಂದ್ರ ಗ್ರಾಮ ಪಂಚಾಯಿತಿಗೆ ಹೋಗಿ ಕೇಳಿ ನಿವೇಶನ ನೀಡುತ್ತಾರೆ ಎಂದು ಹೇಳಿದ್ದರು. ಅದರಂತೆ ನಾವು ಈ ಪಂಚಾಯಿತಿಗೆ ಬಂದಿದ್ದು, ಅಧಿಕಾರಿಗಳು ಏನು ಮಾಹಿತಿ ನೀಡಿತ್ತಿಲ್ಲ. ನಾವು ಜೀವನ ನಡೆಸಲು ಸರಿಯಾದ ಸೂರಿಲ್ಲ. ನನ್ನ ಮಗಳಿಗೆ ಕಿವಿ, ಬಾಯಿ ಇಲ್ಲ. ನಮ್ಮನ್ನು ನೋಡಿಕೊಳ್ಳುವವರು ಯಾರು ಇಲ್ಲ ಎಂದು ತಮ್ಮ ನೋವನ್ನು ಆಂಜಿನಮ್ಮ ತೋಡಿಕೊಂಡರು.