ಚಿಕ್ಕಬಳ್ಳಾಪುರ : ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲರು, ಆಡಳಿತ ಮಂಡಳಿ, ಪೋಷಕರು ಕುಳಿತು ಸಮಸ್ಯೆ ಬಗೆಹರಿಸಿದ್ದರೆ ಇಷ್ಟೊಂದು ವಿವಾದ ಆಗುತ್ತಿರಲಿಲ್ಲ ಎಂದು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಹೇಳಿದರು.
ತಾಲೂಕಿನ ಮೊಟ್ಲೊರು ಗ್ರಾಮದಲ್ಲಿ ಸಾಹಿತಿ ನಿಸಾರ್ ಅಹಮದ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು.
ಹಿಂದಿನಿಂದಲೂ ಹಿಜಾಬ್ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ಏಕಾಏಕಿ ನಿಲ್ಲಿಸುವಂತೆ ಹೇಳಿದ್ದು ತಪ್ಪು. ನಾಲ್ಕೈದು ಯುವಕರು ಹಿಜಾಬ್ ಹಾಕುವುದನ್ನು ನಿಲ್ಲಿಸಿ, ಇಲ್ಲವಾದ್ರೆ ನಾವು ಕೇಸರಿ ಶಾಲು ಹಾಕಲು ಅವಕಾಶ ಕೋರಿದ್ದಾರೆ.
ಆಗ ಯುವಕರಿಗೆ ಬುದ್ಧಿ ಹೇಳಿ ಸರಿಮಾಡಬೇಕಿತ್ತು. ಅದನ್ನು ಬಿಟ್ಟು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಹಿಜಾಬ್ ಧರಿಸುವುದನ್ನು ನಿಲ್ಲಿಸಿ ಎಂಬುದು ತಪ್ಪು. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಅರ್ಥ ಮಾಡಿಕೊಂಡು ಪರಿಹರಿಸಿದ್ದರೆ ವಿವಾದ ಉಂಟಾಗುತ್ತಿರಲ್ಲಿಲ್ಲ ಎಂದರು.
ಹಿಜಾಬ್ ವಿವಾದ ಕೋರ್ಟ್ ಮುಂದಿದೆ. ನ್ಯಾಯಾಲಯ ಸರಿಯಾದ ತೀರ್ಪು ಕೊಡಲಿದೆ. ಹಾಗಾಗಿ, ಅದರ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರು.
ಇದನ್ನೂ ಓದಿ: ಚಿಕ್ಕಮಗಳೂರು : ಹಿಜಾಬ್ಗೆ ಒತ್ತಾಯಿಸಿ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಪ್ರತಿಭಟನೆ