ETV Bharat / state

ಕೊರೊನಾದಿಂದ ಗುಣಮುಖರಾದ ಬಾಗೇಪಲ್ಲಿ ಕ್ಷೇತ್ರದ ಶಾಸಕ ಸುಬ್ಬಾರೆಡ್ಡಿ ಹೇಳಿದ್ದೇನು? - Mla Subbareddy shares his experince

ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ರೋಗಿಗಳ ಸಂಖ್ಯೆ ಹೆಚ್ಚು ಕಡಿಮೆ ಆಗುತ್ತಿದೆ. ಮಳೆಗಾಲದಲ್ಲಿ ಈ ಸಂಖ್ಯೆ ಹಾಗೂ ವೇಗ ಏರುವ ಆತಂಕ ಹೆಚ್ಚಾಗಿದೆ. ಇದರ ನಡುವೆಯೇ ಸಮಾಧಾನದ ವಿಷಯವೆಂದರೆ ಅರ್ಧಕ್ಕರ್ಧ ಕೋವಿಡ್-19 ಪಾಸಿಟಿವ್ ಕೇಸ್ ಇರುವವರು ಹೆಚ್ಚಿನ ಚಿಕಿತ್ಸೆಯೇ ಇಲ್ಲದೆ ಗುಣಮುಖರಾಗುತ್ತಿದ್ದಾರೆ. ಈ ಕುರಿತು ಶಾಸಕ ಸುಬ್ಬಾರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ.

mla-subbareddy
ಶಾಸಕ ಸುಬ್ಬರೆಡ್ಡಿ
author img

By

Published : Jun 7, 2021, 10:39 PM IST

Updated : Jun 7, 2021, 11:00 PM IST

ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿಗೆ ಒಳಗಾದರೆ ಆತಂಕಪಡುವ ಅಗತ್ಯವಿಲ್ಲ. ನಾವು ಎಷ್ಟು ಧೈರ್ಯವಾಗಿ ಇರುತ್ತೇವೆಯೋ ಅಷ್ಟುಬೇಗ ಸೋಂಕಿನಿಂದ ಹೊರಬರುತ್ತೇವೆ. ಮಾನಸಿಕ ಧೈರ್ಯವೇ ಅರ್ಧ ನಮ್ಮನ್ನು ಗುಣಮುಖ ಮಾಡುತ್ತದೆ ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ಶಾಸಕ ಸುಬ್ಬಾರೆಡ್ಡಿ ಮಾತನಾಡಿದರು

ನಾನು ಮನೆಯಲ್ಲಿ ಚಿಕಿತ್ಸೆ ಪಡೆದು ಪ್ರತಿ ದಿನ ವಿಟಮಿನ್‌-ಸಿ ಮಾತ್ರೆ, ರೋಗ ನಿರೋಧಕ ಹೆಚ್ಚಿಸುವ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಬೆಳಗ್ಗೆ ತಿಂಡಿ, ಕಷಾಯ, ಮಧ್ಯಾಹ್ನ ಊಟ, ಸಂಜೆ ಹಣ್ಣು - ಸಿಹಿ, ರಾತ್ರಿ ಊಟ ಸೇರಿದಂತೆ ಬಾದಾಮಿ ಹಾಲು ಸೇವಿಸುತ್ತಿದ್ದೆ. ಸ್ವಲ್ಪ ದಿನಗಳ ಕಾಲ ಧೈರ್ಯವಾಗಿ ಚಿಕಿತ್ಸೆ ಪಡೆದು ನಾನು ಗುಣಮುಖನಾಗಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಓದಿ: ನಮ್ಮ ಪಕ್ಷದಲ್ಲಿ ಯಾವುದೇ ಸಹಿ ಸಂಗ್ರಹ, ಒತ್ತಡಗಳಿಗೆ ಆಸ್ಪದವಿಲ್ಲ: ನಳಿನ್​ ಕುಮಾರ್ ಕಟೀಲ್‌

Last Updated : Jun 7, 2021, 11:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.