ದೊಡ್ಡಬಳ್ಳಾಪುರ : ತಾಲೂಕಿನ ಘಾಟಿ ಸುಬ್ರಮಣ್ಯ ದೇವಸ್ಥಾನ ಬಳಿಯ ರಾಷ್ಟ್ರೊತ್ಥಾನ ಸಂಸ್ಥೆಯವರು ನಡೆಸುತ್ತಿರುವ ಗೋ ಶಾಲೆಗೆ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸದಲ್ಲಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಬೆಂಗಳೂರಿಗೆ ತೆರಳುವಾಗ ಸುಮಾರು ಒಂದು ತಾಸು ಗೋಶಾಲೆಯಲ್ಲಿ ಸಮಯ ಕಳೆದು, ದೇಶಿ ತಳಿ ಹಸುಗಳ ಬಗ್ಗೆ ಮಾಹಿತಿ ತಿಳಿದುಕೊಂಡರು.
ಗುಜರಾತ್ ನಾ ಗಿರ್ ತಳಿ, ಕರ್ನಾಟಕದ ಮಲೆನಾಡು ಗಿಡ್ಡ ಹೀಗೆ ನಾನಾ ರಾಜ್ಯಗಳ ದೇಶಿ ತಳಿಯ ಹಸುಗಳನ್ನ ಕಂಡು ಖುಷಿಪಟ್ಟರು. ಇದೇ ವೇಳೆ ರಾಷ್ಟ್ರತ್ಥಾನ ಸಿಬ್ಬಂದಿ ಗೋಶಾಲೆಗೆ ರಸ್ತೆ ಮಾಡುವಂತೆ ಸಚಿವರಿಗೆ ಮನವಿ ಮಾಡಿದರು.