ಚಿಕ್ಕಬಳ್ಳಾಪುರ : ಮುಸ್ಕಾನ್ ಹೊಗಳಿ ಅಲ್ಖೈದಾ ಉಗ್ರನ ವಿಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಅಂತಹವರ ಹೇಳಿಕೆಗೆ ನಾವು ಖಂಡಿಸುತ್ತೇವೆ ಎಂದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ ಖೈದಾವನ್ನು ಬಹಿಷ್ಕಾರ ಮಾಡಲಾಗಿದೆ. ಅವರ ಹೇಳಿಕೆಯ ಬಗ್ಗೆ ಮಾತನಾಡುವುದೇ ಅಪರಾಧ. ದೇಶದ ಪ್ರತಿಯೊಬ್ಬ ಪ್ರಜೆಯೂ ಆ ಹೇಳಿಕೆಯನ್ನು ಖಂಡಿಸಬೇಕು. ಅಲ್ ಖೈದಾ ಸಂಘಟನೆಯನ್ನು ಬ್ಯಾನ್ ಮಾಡಲಾಗಿದೆ. ನಿಷೇಧ ಮಾಡಿದ ಸಂಘಟನೆಯ ಬಗ್ಗೆ ಮಾತನಾಡುವುದೇ ತಪ್ಪು ಎಂದರು.
ಸಿದ್ದರಾಮಯ್ಯನವರ ಹೇಳಿಕೆ ವಿಚಾರ ಮಾತನಾಡಿದ ಸಚಿವ ಸುಧಾಕರ್, ಇತ್ತೀಚೆಗೆ ಅವರಿಗೆ ಏನು ಆಗ್ತಾ ಇದೆ ಎಂದು ಗೊತ್ತಾಗುತ್ತಿಲ್ಲ. ಆರ್ಎಸ್ಎಸ್ ಬಗ್ಗೆ ಅಪಹಾಸ್ಯ ಟೀಕೆ ಮಾಡಿದ್ರೆ ತಮ್ಮತನವನ್ನೆ ಕಳೆದುಕೊಳ್ಳುತ್ತಾರೆ. ಆರ್ಎಸ್ಎಸ್ನವರು ದೇಶ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ.
ಕೋವಿಡ್ ಸಮಯದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಅವರ ಬಗ್ಗೆ ಯಾರಿಗೆಲ್ಲಾ ಅನುಮಾನವಿದೆ, ಅವರೆಲ್ಲಾ ಒಂದು ದಿನ ಆರ್ಎಸ್ಎಸ್ ಜತೆ ಇದ್ದು ಸೇವೆ ಮಾಡಲಿ. ಆಗಲಾದರೂ ಜ್ಞಾನೋದಯವಾಗುತ್ತದೆ. ಆರ್ಎಸ್ಎಸ್ ಬಗ್ಗೆ ಮಾತಾನಾಡುವವರಿಗೆ ಅದರ ಬಗ್ಗೆ ಏನು ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಬೇಡದ ವಿಚಾರಗಳಲ್ಲಿ ಮೂಗು ತೂರಿಸಲು ಸರ್ಕಾರಕ್ಕೆ ಪ್ರಚಾರದ ಹುಚ್ಚಿಲ್ಲ.. ಎಲ್ಲ ಆರೋಪಗಳಿಗೂ ಉತ್ತರ ಕೊಡಲು ಸಿದ್ಧ.. ಸಚಿವ ಕೋಟ