ETV Bharat / state

ಕೊರೊನಾ ದೃಢಪಟ್ಟ ಸುದ್ದಿ ಕೇಳಿ ವ್ಯಕ್ತಿ ಆತ್ಮಹತ್ಯೆ - ಕೊರೊನಾ ದೃಢಪಟ್ಟ ಸುದ್ದಿ ಕೇಳಿ ವ್ಯಕ್ತಿ ಆತ್ಮಹತ್ಯೆ.

ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಶಿವಾನಂದ್ ನಾಪತ್ತೆಯಾಗಿದ್ದ. ಬಳಿಕ ಶಿವಾನಂದ್ ಮನೆ ಬಳಿ ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ್ದರೂ ಆತ ಸಿಕ್ಕಿರಲಿಲ್ಲ. ಆದರೆ, ಇದೀಗ ಶಿವಾನಂದ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ..

man-commit-suicide-after-hearing-that-his-corona-test-positive
ಕೊರೊನಾ ದೃಢಪಟ್ಟ ಸುದ್ದಿ ಕೇಳಿ ವ್ಯಕ್ತಿ ಆತ್ಮಹತ್ಯೆ
author img

By

Published : Apr 25, 2021, 8:59 PM IST

ಚಿಕ್ಕಬಳ್ಳಾಪುರ : ಕಳ್ಳತನ ಪ್ರಕರಣದಲ್ಲಿ ಎರಡು ಬಾರಿ ಜೈಲು ವಾಸ ಅನುಭವಿಸಿದ್ದ ವ್ಯಕ್ತಿಯೋರ್ವ ಕೊರೊನಾ ಪಾಸಿಟಿವ್ ವರದಿ ಬಂದ ಬಳಿಕ ನೇಣಿಗೆ ಶರಣಾಗಿರುವ ಘಟನೆ ಗೌರಿಬಿದನೂರು ತಾಲೂಕಿನ ಹಿರೇಬಿದನೂರು ಬಳಿಯ ಉತ್ತರ ಪಿನಿಕಿನಿ ನದಿ ಭಾಗದಲ್ಲಿ ನಡದಿದೆ‌.

ತಾಲೂಕಿನ ವೇದಲವೇಣಿ ಗ್ರಾಮದ ಶಿವಾನಂದ (24) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಮೃತ ವ್ಯಕ್ತಿ ದ್ವಿಚಕ್ರ ವಾಹನ ಕಳ್ಳತನದ ಆರೋಪದಲ್ಲಿ 2 ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ.

ಇದೇ ತಿಂಗಳು 20ರಂದು ಗೌರಿಬಿದನೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವ್ ವರದಿ ಬಂದ ಮೇಲೆ ಸೋಂಕಿತ ವ್ಯಕ್ತಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಕೊರೊನಾ ಪಾಸಿಟಿವ್ ವರದಿ ಬಂದಿರುವ ಕುರಿತು ಆರೋಗ್ಯ ಇಲಾಖೆ ಸಿಬ್ಬಂದಿ ಆತನಿಗೆ ಮಾಹಿತಿ ನೀಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಸೂಚಿಸಿದ್ದಾರೆ.

ಆದರೆ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಶಿವಾನಂದ್ ನಾಪತ್ತೆಯಾಗಿದ್ದ. ಬಳಿಕ ಶಿವಾನಂದ್ ಮನೆ ಬಳಿ ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ್ದರೂ ಆತ ಸಿಕ್ಕಿರಲಿಲ್ಲ. ಆದರೆ, ಇದೀಗ ಶಿವಾನಂದ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ನಗರ ಠಾಣೆಯ ಪಿಎಸ್​​ಐ ಪ್ರಸನ್ನ ಕುಮಾರ್ ಭೇಟಿ ನೀಡಿ ಮೃತದೇಹವನ್ನು ಸಾರ್ವಜನಿಕ ಶವಾಗಾರಕ್ಕೆ ಸ್ಥಳಾಂತರಿಸಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.