ETV Bharat / state

ಚಿಕ್ಕಬಳ್ಳಾಪುರ ಜಿಲ್ಲೆಯೊಂದಿಗೆ ಮಹಾತ್ಮನ ನಂಟು... ನಂದಿ ಬೆಟ್ಟಕ್ಕೆ ಬಂದಿದ್ದರು ಗಾಂಧೀಜಿ - ganshi visits to chikbellapur

ಇಂದು ಗಾಂಧಿ ಜಯಂತಿ ಹಿನ್ನೆಲೆ ಕೊರೊನಾ ನಡುವೆಯೂ ಶಿಸ್ತು ಕ್ರಮಗಳನ್ನು ಪಾಲಿಸಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗಾಂಧಿ ಜಯಂತಿ ಆಚರಣೆ ಮಾಡಲಾಯ್ತು.

chikbellapur
ಚಿಕ್ಕಬಳ್ಳಾಪುರ
author img

By

Published : Oct 2, 2020, 1:33 PM IST

ಚಿಕ್ಕಬಳ್ಳಾಪುರ: ಇಂದು ದೇಶಾದ್ಯಂತ 151ನೇ ಗಾಂಧಿ ಜಯಂತಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ವಿಶೇಷ ಅಂದ್ರೆ ಮಹಾತ್ಮ ಗಾಂಧೀಜಿ ಒಮ್ಮೆ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಗೆ ಬಂದಿದ್ರು . ಈ ವೇಳೆ ನಂದಿ ಬೆಟ್ಟಕ್ಕೆ ಕೂಡ ಭೇಟಿ ನೀಡಿದ್ರು ಎಂಬುದು ಇತಿಹಾಸ.

1934, ಜನವರಿ 4 - ಮೊದಲ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಗಾಂಧೀಜಿ ಭೇಟಿ:

ಜನವರಿ 4, 1934ರಲ್ಲಿ ಮೊದಲ ಬಾರಿಗೆ ಗಾಂಧೀಜಿ ಹಿಂದೂಪುರದಿಂದ ಗೌರಿಬಿದನೂರು ಮಾರ್ಗವಾಗಿ ಬಂದು ಚಿಕ್ಕಬಳ್ಳಾಪುರದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಿದ್ರು. ನಂತರ ತುಮಕೂರಿನ ಹರಿಜನ ಕೇರಿಗಳಿಗೆ ಭೇಟಿ ನೀಡಿ, ತ್ಯಾಮಗೊಂಡ್ಲು, ನೆಲಮಂಗಲ ಮೂಲಕ ಬೆಂಗಳೂರಿಗೆ ಪಯಣ ಬೆಳೆಸಿದ್ರು. ಸಂಜೆ ಬೆಂಗಳೂರಿನಲ್ಲಿ ನೇಕಾರ ಒಕ್ಕೂಟದ ಶಾಖೆ ಉದ್ಘಾಟನೆ ಮಾಡಿ, ಮಹಿಳಾ ಸಭೆ ಉದ್ಧೇಶಿಸಿ ಭಾಷಣ ಮಾಡಿದ್ರು. ಬಳಿಕ ಮೈಸೂರಿಗೆ ಪ್ರಯಾಣ ಬೆಳೆಸಿದರಂತೆ.

ಚಿಕ್ಕಬಳ್ಳಾಪುರ ಜೊತೆ ಗಾಂಧೀಜಿ ನಂಟು

ನಂದಿ ಮತ್ತು ಗಾಂಧಿ:

ನಂದಿ ಬೆಟ್ಟದ ತಪ್ಪಲಿನಲ್ಲೇ ಹುಟ್ಟಿದ್ದ ಮೋಕ್ಷಗೊಂಡಂ ವಿಶ್ವೇಶ್ವರಯ್ಯನವರಿಗೂ ಮಹಾತ್ಮ ಗಾಂಧೀಜಿಯವರಿಗೂ ವಿಭಿನ್ನ ದೃಷ್ಟಿ-ಧೋರಣೆ ಇದ್ದರೂ ಇಬ್ಬರಲ್ಲೂ ದೇಶ ಪ್ರೇಮ ಮಾತ್ರ ಅಪರಿಮಿತವಾದದ್ದು. ನಂದಿ ಬೆಟ್ಟದಲ್ಲೊಮ್ಮೆ ಗಾಂಧೀಜಿ ಮತ್ತು ವಿಶ್ವೇಶ್ವರಯ್ಯ ಭೇಟಿ ನಿಗದಿಯಾಗುತ್ತದೆ. ಸಮಯಕ್ಕೆ ತುಂಬಾ ಬೆಲೆ ನೀಡುತ್ತಿದ್ದ ವಿಶ್ವೇಶ್ವರಯ್ಯನವರು ನಿಗದಿತ ಸಮಯಕ್ಕೆ ಗಾಂಧೀಜಿ ಭೇಟಿಗೆ ತೆರಳುತ್ತಾರೆ. ಆದರೆ ಗಾಂಧೀಜಿ 5 ನಿಮಿಷ ತಡವಾಗಿ ಬಂದು ಭೇಟಿಯಾಗಲು ಸಾಧ್ಯವಾಗಲಿಲ್ಲವಂತೆ. ಮಾರನೇ ದಿನ ಗಾಂಧೀಜಿ ಮತ್ತೆ ಭೇಟಿ ಮಾಡಲು ನಿಗದಿ ಮಾಡಿ 5 ನಿಮಿಷ ಮುಂಚಿತವಾಗಿಯೇ ಸರ್.ಎಂ.ವಿಶ್ಚೇಶ್ವರಯ್ಯನವರಿಗಾಗಿ ಬಂದು ಕಾದಿದ್ದರಂತೆ. ಇವರಿಬ್ಬರ ಭೇಟಿ ಕೇವಲ ಹತ್ತು-ಹದಿನೈದು ನಿಮಿಷಗಳಲ್ಲಿ ಮುಗಿದಿತ್ತಂತೆ. ಈ ವೇಳೆ ವಿಶ್ವೇಶ್ವರಯ್ಯನವರು ಇದು ಬಹುತೇಕ ನಮ್ಮ ಕೊನೆಯ ಭೇಟಿಯಾಗಬಹುದು ಎಂದು ಗಾಂಧೀಜಿಯವರಿಗೆ ತಿಳಿಸಿದ್ರಂತೆ.

ಮಹಾತ್ಮ ಗಾಂಧಿ ಚಿಕ್ಕಳ್ಳಾಪುರ ಜಿಲ್ಲೆಯ ವಿಶ್ವ ಪ್ರಸಿದ್ಧ ಗಿರಿಧಾಮ ನಂದಿ ಬೆಟ್ಟಕ್ಕೆ 1936ರಲ್ಲಿ ಬಂದು 42 ದಿನಗಳ ಸುದೀರ್ಘ ಅವಧಿಯಷ್ಟು ವಾಸ್ತವ್ಯ ಹೂಡಿದ್ದರಂತೆ. ಮಹಾತ್ಮ ಗಾಂಧೀಯವರು ಅಸ್ತಮ ಪೀಡಿತರಾಗಿದ್ದರು. ಸರ್ವ ರೋಗ ಗುಣಮುಖವಾಗಲು ನಂದಿ ಗಿರಿಧಾಮದ ಅಮೃತ ಸರೋವರದ ನೀರು ಕುಡಿದರೆ ಅಸ್ತಮಾಗೆ ಸಾಕಷ್ಟು ಮುಕ್ತಿ ಸಿಗುತ್ತದೆಂದು ಅದ್ಯಾರೋ ತಿಳಿಸಿದ್ದರಂತೆ. ಹೀಗಾಗಿ ಗಾಂಧೀಜಿ ನೇರವಾಗಿ ನಂದಿ ಗಿರಿಧಾಮಕ್ಕೆ ಬಂದಿದ್ದರು. ನಂದಿ ಗಿರಿಧಾಮಕ್ಕೆ ಗಾಂಧಿಯವರನ್ನು ಡೋಲಿಯಲ್ಲಿ ಮೆಟ್ಟಿಲುಗಳ ಮೂಲಕ ಕರೆದೊಯ್ದರಂತೆ. ಪ್ರತಿನಿತ್ಯ ನಂದಿ ಗಿರಿಧಾಮದಲ್ಲಿ ಅಮೃತ ಸರೋವರದ ನೀರನ್ನು ಕುಡಿಯುತ್ತಿದ್ದರಂತೆ.

ಒಮ್ಮೆ ಗಾಂಧೀಜಿಯವರ ಭೇಟಿಗೆ ಬಂದ ನ್ಯಾಯಾಧಿಕಾರಿ, ನೀವು ಪೂರ್ತಿಯಾಗಿ ಗುಣಮುಖರಾಗುವವರೆಗೂ ಇಲ್ಲಿಯೇ ಇರಬೇಕು. ಆಗ ಈ ಬೆಟ್ಟದ ಕೀರ್ತಿ ಹೆಚ್ಚಾಗಿ, ಹೆಚ್ಚು ಜನ ಇಲ್ಲಿಗೆ ಬರುತ್ತಾರೆ ಎಂದು ಹೇಳುತ್ತಾರೆ. ಆಗ ಗಾಂಧೀಜಿ ಮುಗುಳ್ನಗುತ್ತಾ, ಅಗತ್ಯವಾಗಿ ಆಗಬಹುದು. ಆದರೆ ಅದರಿಂದ ಹೆಚ್ಚಾಗಿ ಬರುವ ಆದಾಯದಲ್ಲಿ ಅರ್ಧದಷ್ಟು ಖಾದಿ ನಿಧಿಗೆ ಕೊಡಬೇಕೆಂದು ತಿಳಿಸುತ್ತಾರೆ.

ಅಸ್ತಮಾದಿಂದ ಸಾಕಷ್ಟು ಚೇತರಿಕೆ ಕಂಡ ಬಳಿಕ ಗಿರಿಧಾಮ ಬಿಟ್ಟು ತೆರಳಿದರೆಂದು ಹೇಳಲಾಗುತ್ತದೆಯಾದರೂ ಅವರ ಆಪ್ತ ಕಾರ್ಯದರ್ಶಿ ಮಹಾದೇವ ದೇಸಾಯಿ ಸಂದರ್ಶಕರ ಪುಸ್ತಕದಲ್ಲಿ ಗಾಂಧೀಜಿ ಇಲ್ಲಿ ತಂಗಿದ್ದನ್ನು ಮಾತ್ರ ದಾಖಲಿಸಿದ್ದಾರಂತೆ. ಬಾಪೂಜಿಯವರು ಇಲ್ಲಿ ತಂಗಿದ್ದ ಅವಧಿಯಲ್ಲಿ ತಾವು ನೀಡಿದ್ದ ಆತಿಥ್ಯಕ್ಕೆ ಧನ್ಯವಾದಗಳು ಎಂದು ಅವರು ಬರೆದಿದ್ದಾರೆ. ಗಾಂಧೀಜಿ ತಂಗಿದ್ದ ಕೊಠಡಿಗಳಿರುವ ಭವನಕ್ಕೆ ಗಾಂಧಿ ನಿಲಯ ಎಂದು ಹೆಸರಿಡಲಾಗಿದೆ. ಗಾಂಧೀಜಿ ನಂದಿಯಲ್ಲಿದ್ದಾಗ ನಂದಿ ತಪ್ಪಲಿನ ಮಡುಕು ಹೊಸಹಳ್ಳಿಗೆ ಬಂದಿದ್ದರಂತೆ. ಈ ಹಳ್ಳಿಗೆ ಗಾಂಧೀಪುರ ಎಂದು ಹೆಸರಿಡಲಾಗಿದೆ.

ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ನಂದಿ ಬೆಟ್ಟದಿಂದ ಹೊರಟ ಗಾಂಧೀಜಿ, ಚಿಕ್ಕಬಳ್ಳಾಪುರದ ಪ್ರೌಢ ಶಾಲಾ ಆವರಣದ ಬಳಿ ನಾಲ್ವಡಿ ಕೃಷ್ಣರಾಜರ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಂತೆ. ಮೇ 31ರಂದು ನಂದಿ ಬೆಟ್ಟದಿಂದ ಹೊರಟು ಚಿಕ್ಕಬಳ್ಳಾಪುರ, ಚಿಂತಾಮಣಿ, ಕೋಲಾರ, ಬೌರಿಂಗ್​ಪೇಟೆಯ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ತೆರಳಿದರಂತೆ.

ಮಹಾತ್ಮ ಗಾಂಧೀಜಿ ಹಾಗೂ ಚಿಕ್ಕಬಳ್ಳಾಪುರದ ನಂಟು ಬಹಳ ಮಹೋನ್ನತವಾದದ್ದು. ಗಾಂಧೀಜಿಯವರಿಗಿದ್ದ ಕಾಯಿಲೆ ಗುಣಮಖ ಪಡಿಸಿದ ಕೀರ್ತಿ ಚಿಕ್ಕಬಳ್ಳಾಪುರ ನಂದಿಗಿರಿ ಧಾಮಕ್ಕೆ ಸಲ್ಲುತ್ತದೆ. ಸದ್ಯ ಇಷ್ಟು ಪ್ರಸಿದ್ಧ ಸ್ಥಳಗಳ ಅಭಿವೃದ್ಧಿಗೆ ಜಿಲ್ಲಾಡಳಿತ ಹಾಗೂ ಸರ್ಕಾರ ಗಮನ ಹರಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.