ETV Bharat / state

ಚಿಕ್ಕಬಳ್ಳಾಪುರ: ನಂದಿ ಬೆಟ್ಟ ಪ್ರವೇಶಕ್ಕೆ ಮತ್ತೆ ಲಾಕ್​ಡೌನ್​ ಅಡ್ಡಿ

author img

By

Published : Jul 13, 2021, 5:36 PM IST

ಸಿಲಿಕಾನ್ ಸಿಟಿಗೆ ಹತ್ತಿರವಿರುವ ನಂದಿ ಬೆಟ್ಟಕ್ಕೆ ವೀಕೆಂಡ್ ಬಂತೆಂದರೆ ಪರಿಸರ ಪ್ರೇಮಿಗಳು ದೊಡ್ಡ ಸಂಖ್ಯೆಯಲ್ಲಿ ಭೇಟಿ ಕೊಟ್ಟು ಪ್ರಕೃತಿ ಸೌಂದರ್ಯ ಸವಿಯುತ್ತಾರೆ.

nandi-hills
ನಂದಿ ಬೆಟ್ಟ

ಚಿಕ್ಕಬಳ್ಳಾಪುರ: ವಿಶ್ವಪ್ರಸಿದ್ಧ ಪ್ರವಾಸಿಗರ ನೆಚ್ಚಿನ ಸ್ಥಳ ಹಾಗೂ ಪ್ರೇಮಿಗಳ ಸ್ವರ್ಗ ನಂದಿಬೆಟ್ಟಕ್ಕೆ ಜಿಲ್ಲಾಡಳಿತ ಮತ್ತೆ ಲಾಕ್​ಡೌನ್​ ಆದೇಶ ಹೊರಡಿಸಿದೆ.

ನಂದಿ ಬೆಟ್ಟದಲ್ಲಿ ಸೂರ್ಯೋದಯ ಸೊಬಗು

ವೀಕೆಂಡ್‌ನಲ್ಲಿ ಎರಡು ದಿನಗಳ ಸಂಪೂರ್ಣ ಲಾಕ್​ಡೌನ್​ಗೆ ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್ ಆದೇಶ ಹೊರಡಿಸಿದ್ದು, ಪ್ರವಾಸಿಗರಿಗೆ ಮತ್ತೆ ಗೊಂದಲವಾಗಿದೆ. ಅನ್​ಲಾಕ್​ ನಂತರ ಪ್ರವಾಸಿಗರಿಗೆ ಬೆಟ್ಟಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿತ್ತು. ಆದರೆ ದಾಖಲೆಯ ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ವೀಕ್ ಎಂಡ್ ಲಾಕ್‌ಡೌನ್ ಆದೇಶವನ್ನು ಜಾರಿಗೊಳಿಸುವಂತೆ ಆದೇಶ ಹೊರಡಿಸಿದೆ.

ಸಿಲಿಕಾನ್ ಸಿಟಿಗೆ ಹತ್ತಿರವಿರುವ ಈ ಬೆಟ್ಟಕ್ಕೆ ವೀಕ್ ಎಂಡ್ ಬಂತೆಂದರೆ ಪರಿಸರ ಪ್ರೇಮಿಗಳು ದೊಡ್ಡ ಸಂಖ್ಯೆಯಲ್ಲಿ ಭೇಟಿ ಕೊಟ್ಟು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾರೆ. ಸದ್ಯ ಕೊರೊನಾ ಸೊಂಕಿನ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಸುಧಾಕರ್ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ಇದನ್ನೂ ಓದಿ: ಒಂದು ಹೆಣ್ಣು ಆಗಿ ಈ ರೀತಿ ಮಾಡೋಕೆ ಎಷ್ಟು ಧೈರ್ಯ?: ನಟ ದರ್ಶನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.