ETV Bharat / state

ಗುಡಿಬಂಡೆ ಪಟ್ಟಣ ಪಂಚಾಯತ್ ಚುನಾವಣೆ : ಬಿಜೆಪಿಯಿಂದ ಇಬ್ಬರು ಕಾಂಗ್ರೆಸ್​ ಸದಸ್ಯರ ಕಿಡ್ನ್ಯಾಪ್​ ಆರೋಪ - ಕಾಂಗ್ರೆಸ್​ ಪ್ರತಿಭಟನೆ

ಕಾಂಗ್ರೆಸ್​ ಸದಸ್ಯರನ್ನು ಆರೋಗ್ಯ ಸಚಿವ ಕೆ.ಸುಧಾಕರ್​ ಅವರ ಆಪ್ತರು ಅಪಹರಣ ಮಾಡಿದ್ದಾರೆ ಎಂದು ಶಾಸಕ ಎಸ್ ಎನ್. ಸುಬ್ಬಾರೆಡ್ಡಿ ಆರೋಪಿಸಿದ್ದಾರೆ..

local body election congress members kidnap
ಗುಡಿಬಂಡೆ ಪಟ್ಟಣ ಪಂಚಾಯಿತಿ ಚುನಾವಣೆ: ಬಿಜೆಪಿಯಿಂದ ಇಬ್ಬರು ಕಾಂಗ್ರೆಸ್​ ಸದಸ್ಯರ ಕಿಡ್ನ್ಯಾಪ್​ ಆರೋಪ
author img

By

Published : Nov 2, 2021, 3:49 PM IST

ಗುಡಿಬಂಡೆ : ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯತ್‌ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆ ಇಬ್ಬರು ಕಾಂಗ್ರೆಸ್​ ಸದಸ್ಯರನ್ನು ಬಿಜೆಪಿಯವರು ಅಪಹರಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್​ ಶಾಸಕ ಎಸ್​ ಎನ್ ಸುಬ್ಬಾರೆಡ್ಡಿ ನೇತೃತ್ವದಲ್ಲಿ ಪಟ್ಟಣದ ಪೊಲೀಸ್​ ಠಾಣೆ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ 1ನೇ ವಾರ್ಡಿನ ರಾಜೇಶ್ ಮತ್ತು 5ನೇ ವಾರ್ಡಿನ ಗಂಗರಾಜು ಕಿಡ್ನಾಪ್ ಆದ ಕಾಂಗ್ರೆಸ್​ ಸದಸ್ಯರು. ರಾಷ್ಟ್ರೀಯ ಹೆದ್ದಾರಿ 7ರ ಬಳಿಯಿರುವ ಕಾಮತ್​ ಹೋಟೆಲ್​ ಬಳಿ ನಮ್ಮ ಸದಸ್ಯರನ್ನು ಆರೋಗ್ಯ ಸಚಿವ ಕೆ. ಸುಧಾಕರ್​ ಅವರ ಆಪ್ತರು ಅಪಹರಣ ಮಾಡಿದ್ದಾರೆ ಎಂದು ಶಾಸಕ ಎಸ್​.ಎನ್​. ಸುಬ್ಬಾರೆಡ್ಡಿ ಆರೋಪಿಸಿದ್ದಾರೆ.

ಕೂಡಲೇ ಅವರನ್ನು ಬಿಡುಗಡೆ ಮಾಡಿಸಬೇಕು ಎಂದು ಒತ್ತಾಯಿಸಿ ಗುಡಿಬಂಡೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಕಾಂಗ್ರೆಸ್​ ಸದಸ್ಯರ ಅಪಹರಣದಿಂದಾಗಿ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅಹಿತರಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.