ಚಿಂತಾಮಣಿ: ತಾಲೂಕಿನ ಮುರುಗಮಲೆ ಬೆಟ್ಟದಲ್ಲಿ ಇಂದು ಸಂಜೆ ಚಿರತೆ ಕಾಣಿಸಿಕೊಂಡಿದ್ದು, ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರು ಭೀತಿಯಲ್ಲಿ ಓಡಾಡುವಂತಾಗಿದೆ.
ಮೇ 18ರಂದು ಬೆಟ್ಟದ ಬೃಹತ್ ಬಂಡೆಯ ಮೇಲೆ ಚಿರತೆ ಬಿಸಿಲಿಗೆ ಮೈಯೊಡ್ಡಿ ಕುಳಿತಿರುವುದನ್ನು ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ, ಇಂದು ಸಹ ಮತ್ತೆ ಅದೇ ಬಂಡೆಯ ಮೇಲೆ ಚಿರತೆ ಕುಳಿತಿದ್ದು, ನಂತರ ಪಕ್ಕದ ಗುಹೆಯೊಳಗೆ ಹೋಗುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ.
ಚಿರತೆ ಎರಡು ತಿಂಗಳಿಂದ ಕಾಣಿಸಿಕೊಳ್ಳುತ್ತಿದ್ದರೂ ಜನ, ಜಾನುವಾರುಗಳ ಮೇಲಾಗಲಿ ಎರಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಯಾವುದೇ ಅನಾಹುತ ನಡೆಯದಂತೆ ಎಚ್ಚೆತ್ತುಕೊಂಡು ಚಿರತೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಮುರುಗಮಲೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.