ETV Bharat / state

ಪ್ರಯಾಣಿಕನ ಜೊತೆಗೆ ಕೋಳಿಗೂ ಟಿಕೆಟ್​​ ನೀಡಿದ ನಿರ್ವಾಹಕ..! - KSRTC charge for hen

ಕೆಎಸ್​ಆರ್​ಟಿಸಿ ಬಸ್​​ನಲ್ಲಿ ಕೋಳಿ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಕಂಡಕ್ಟರ್​​ ಆತನಿಗೆ ಪೂರ್ತಿ ಟಿಕೆಟ್ ಹಾಗೂ ಕೋಳಿಗೆ ಅರ್ಧ ಟಿಕೆಟ್ ಚಾರ್ಜ್​ ಮಾಡಿದ್ದಾರೆ.

ksrtc-conductor-charges-half-ticket-for-hen
ಕೋಳಿಗೆ ಅರ್ಧ ಟಿಕೆಟ್ ಚಾರ್ಜ್​
author img

By

Published : Sep 1, 2021, 9:57 AM IST

ಚಿಕ್ಕಬಳ್ಳಾಪುರ : ಕೆಎಸ್​ಆರ್​ಟಿಸಿ ಬಸ್​​ನಲ್ಲಿ ವ್ಯಕ್ತಿಯೊಬ್ಬ ತನ್ನ ಜೊತೆ ತೆಗೆದುಕೊಂಡು ಹೊರಟಿದ್ದ ಕೋಳಿಗೂ ಕೂಡ ನಿರ್ವಾಹಕ ಅರ್ಧ ಟಿಕೆಟ್ ನೀಡಿದ್ದು, ಈ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

ತಾಲೂಕಿನ ಪೆರೇಸಂದ್ರದಲ್ಲಿ ವ್ಯಕ್ತಿಯೊಬ್ಬ ಇನ್ನೇನು ಶ್ರಾವಣ ಮಾಸ ಮುಗಿಯುತ್ತೆ ಎಂಬ ಖುಷಿಯಲ್ಲಿ ಮನೆಗೆ ಕೋಳಿ ಖರೀದಿಸಿಕೊಂಡು ಸೋಮೇಶ್ವರಕ್ಕೆ ಹೋಗಲು ಕೆಎಸ್​ಆರ್​ಟಿಸಿ ಬಸ್ ಹತ್ತಿದ್ದ. ಆಗ ಬಸ್‌ ಕಂಡಕ್ಟರ್ ಪ್ರಯಾಣಿಕನ ಜೊತೆಗೆ ಇದ್ದ ನಾಟಿ ಕೋಳಿಗೂ ಅರ್ಧ ಟಿಕೆಟ್ ನೀಡಿದ್ದಾರೆ.

ksrtc-conductor-charges-half-ticket-for-hen
ಪ್ರಯಾಣಿಕನ ಜೊತೆ ಕೋಳಿ

ಪೆರೇಸಂದ್ರದಿಂದ ಸೋಮೇಶ್ವರಕ್ಕೆ ತೆರಳುವ ಕೆಎಸ್​ಆರ್​ಟಿಸಿ ಬಸ್​​ನಲ್ಲಿ ಕೋಳಿ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಕಂಡಕ್ಟರ್​, ಆತನಿಗೆ ಪೂರ್ತಿ ಟಿಕೆಟ್ ಹಾಗೂ ಕೋಳಿಗೆ ಅರ್ಧ ಟಿಕೆಟ್ (5ರೂ) ಚಾರ್ಜ್​ ಮಾಡಿದ್ದಾರೆ. ಟಿಕೆಟ್​ ಹಾಗೂ ಕೋಳಿಯೊಂದಿಗೆ ತೆರಳುತ್ತಿದ್ದ ವ್ಯಕ್ತಿಯ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಆಗಿದೆ.

ಟಿಕೆಟ್​

ಕೋಳಿಗೆ ಅರ್ಧ ಟಿಕೆಟ್ ನೀಡಿದ ಪ್ರಯಾಣಿಕ ಅದನ್ನು ತನ್ನ ಪಕ್ಕ ಕೂರಿಸಿಕೊಂಡು ಪ್ರಯಾಣಿಸಿದ್ದಾನೆ. ಈ ಹಿಂದೆಯೂ ಕೂಡ ನಿರ್ವಾಹಕ ಕೋಳಿಗೆ ಟಿಕೆಟ್​ ನೀಡಿದ್ದ ಬಗ್ಗೆ ವೈರಲ್​ ಆಗಿತ್ತು.

ಇದನ್ನೂ ಓದಿ: ಇಂದಿನಿಂದ ಶಾಲಾ - ಕಾಲೇಜು ತೆರೆದ ಈ ರಾಜ್ಯಗಳು.. ತೆಲಂಗಾಣದಲ್ಲಿ ಪೂರ್ಣ ಪ್ರಮಾಣದ ತರಗತಿ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.