ಚಿಂತಾಮಣಿ (ಚಿಕ್ಕಬಳ್ಳಾಪುರ) : ಚಿಂತಾಮಣಿ ಶಾಸಕ ಎಂ.ಕೃಷ್ಣಾರೆಡ್ಡಿ ಗಿಡ ನೆಡುವುದರ ಮೂಲಕ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಮಾಡಿದ್ದಾರೆ.
ನಾಡಪ್ರಭು ಕೆಂಪೇಗೌಡರ 511ನೇ ಜಯಂತಿ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ನಗರದ 31ನೇ ವಾರ್ಡ್ನ ತಿಮ್ಮಸಂದ್ರದಲ್ಲಿ ಗಿಡ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಮಾರು 300 ಗಿಡಗಳನ್ನ ನೆಡುವು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಎಂ.ಕೃಷ್ಣಾರೆಡ್ಡಿ, ಕೆಂಪೇಗೌಡರನ್ನ ಸ್ಮರಿಸಿದರು.
ಈ ವೇಳೆ ಅರಣ್ಯಾಧಿಕಾರಿ ಜಯಚಂದ್ರ, ಪೌರಾಯುಕ್ತ ಹರೀಶ್, ನಗರಸಭಾ ಸದಸ್ಯ ಶೇಖ್ ಸಾಧಿಕ್ ರಜ್ವಿ ಮತ್ತಿತರರು ಉಪಸ್ಥಿತರಿದ್ದರು.