ಚಿಕ್ಕಮಗಳೂರು: ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ಅವರ ನಿವಾಸದಲ್ಲಿ ಶುಕ್ರವಾರವೂ ಕೂಡ ಐಟಿ ಅಧಿಕಾರಿಗಳಿಂದ ಶೋಧ ಕಾರ್ಯ ನಡೆಯಿತು.
ಸತತ ಎರಡನೇ ದಿನವೂ ಮುಂದುವರಿದ ಐಟಿ ದಾಳಿ ಚಿಕ್ಕಮಗಳೂರು ನಗರದ ಹೂವಿನ ಮಾರ್ಕೆಟ್ ಪಕ್ಕದ ಅವರ ಮನೆಯಲ್ಲಿ ಶೋಧ ಹಾಗೂ ಪರಿಶೀಲನೆ ಜರುಗಿತು. ಇನ್ನೂ ಕೂಡ ಗಾಯತ್ರಿ ಶಾಂತೇಗೌಡ ಅವರು ಮನೆಗೆ ಬಂದಿಲ್ಲ. ಸದ್ಯ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಇದ್ದು, ನಿವಾಸದ ಮುಂಭಾಗದ ರಸ್ತೆಯನ್ನು ಕಂಪ್ಲೀಟ್ ಕ್ಲೋಸ್ ಪೊಲೀಸರು ಮಾಡಿದ್ದಾರೆ.
ಸಾರ್ವಜನಿಕರು ಓಡಾಡದಂತೆ ಎರಡು ಬದಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ.ನಿನ್ನೆ ಮನೆ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮುಂಜಾಗ್ರತೆ ಕ್ರಮವಾಗಿ ಪೊಲೀಸರು ರಸ್ತೆ ಬಂದ್ ಮಾಡಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಇದನ್ನೂಓದಿ:ಶಾಸಕ ತನ್ವೀರ್ ಸೇಠ್ಗೆ ಜೀವ ಬೆದರಿಕೆ: ಮೈಸೂರಿನಲ್ಲಿ ದೂರು ದಾಖಲು