ಚಿಕ್ಕಬಳ್ಳಾಪುರ: ಕೊರೊನಾ ಶಂಕಿತ ಇಬ್ಬರು ವ್ಯಕ್ತಿಗಳಿಗೆ ಜಿಲ್ಲಾಸ್ಪತ್ರೆಯ ಐಸೊಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿದು ಬಂದಿದೆ.
ಗೌರಿಬಿದನೂರು ತಾಲೂಕಿನ ಅಲ್ಲಿ ಪುರ ಮೂಲದ ಇಬ್ಬರು ಶಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಈ ಇಬ್ಬರು ವ್ಯಾಪಾರ ನಿಮಿತ್ತ ಹೊರ ದೇಶಕ್ಕೆ ಹೋಗಿ ಬಂದಿದ್ದು ರೋಗದ ಲಕ್ಷಣ ಕಂಡು ಬಂದ ಹಿನ್ನೆಲೆ ಇಬ್ಬರ ರಕ್ತ ಮತ್ತು ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಸದ್ಯ ಇಬ್ಬರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.
ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಕೊರೊನಾ ವೈರಸ್ ಸೊಂಕು ಪತ್ತೆಯಾಗಿ ಸಾಕಷ್ಟು ಜನ ಸಾವನ್ನಪ್ಪಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ವೈರಲ್ ಮಾಡುತ್ತಿದ್ದಾರೆ. ಇವರ ವಿರುದ್ದ ಕ್ರಮ ತೆಗೆದುಕೊಳ್ಳುವುದಾಗಿ ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.