ಚಿಕ್ಕಬಳ್ಳಾಪುರ: ಐತಿಹಾಸಿಕ, ಪುರಾಣಪ್ರಸಿದ್ಧ ವಿದುರಾಶ್ವತ್ಥಕ್ಕೆ ಇಂದು ಇನ್ಫೋಸಿಸ್‌ನ ಡಾ. ಸುಧಾಮೂರ್ತಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ವಿದುರಾಶ್ವತ್ಥ ಗ್ರಾಮದ ಅಶ್ವತ್ಥನಾರಾಯಣಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುಧಾಮೂರ್ತಿ ಸ್ವಾತಂತ್ರ್ಯ ಚಳವಳಿಯಲ್ಲಿ ಹುತಾತ್ಮರಾದ ಸ್ಮಾರಕಕ್ಕೆ ಭೇಟಿ ನೀಡಿ, ನಮನ ಸಲ್ಲಿಸಿದರು. ನಂತರ ಸ್ವಾತಂತ್ರ್ಯ ಸಂಗ್ರಾಮದ ಚಿತ್ರ ಗ್ಯಾಲರಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ವಿದುರಾಶ್ವತ್ಥ ಗ್ರಾಮದಲ್ಲಿ ವಿದುರಾ ಎಂಬ ಮಹರ್ಷಿ ಅಶ್ವತ್ಥ ಮರ ನೆಟ್ಟಿರುವ ಇತಿಹಾಸವಿದೆ. ಜೊತೆಗೆ, ಕರ್ನಾಟಕ ಜಲಿಯನ್ ವಾಲಾಬಾಗ್ ಎಂದೂ ಪ್ರಖ್ಯಾತಿ ಪಡೆದಿದೆ.

ಇದನ್ನೂ ಓದಿ: ಹವಾಮಾನ ವೈಪರೀತ್ಯ: ಸಿಎಂ ಬೊಮ್ಮಾಯಿ ಚಿತ್ರದುರ್ಗ ಪ್ರವಾಸ ರದ್ದು