ಚಿಕ್ಕಬಳ್ಳಾಪುರ: 108 ಆಂಬ್ಯುಲೆನ್ಸ್ ರೀತಿಯಲ್ಲಿ ಪಶುಗಳ ಆರೋಗ್ಯದ ರಕ್ಷಣೆಗೆ ಆಂಬ್ಯುಲೆನ್ಸ್ ಅನ್ನು ಪ್ರತಿ ಜಿಲ್ಲೆಗಳಿಗೂ ಶೀಘ್ರವೇ ಒದಗಿಸಲಾಗುವುದು ಎಂದು ರಾಜ್ಯ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ನಗರದದ ಮೇಗಾ ಡೇರಿಗೆ ಭೇಟಿ ನೀಡಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು, ಕೋವಿಡ್-19 ಸಲುವಾಗಿ ಪಶು ಆಂಬ್ಯುಲೆನ್ಸ್ ಸೇವೆ ಆರಂಭಕ್ಕೆ ಆಡಚಣೆ ಉಂಟಾಗುತ್ತಿದ್ದು, ಶೀಘ್ರದಲ್ಲೇ ಸೇವೆಯನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಪಶು ಸಂಪತ್ತು ರಕ್ಷಿಸಬೇಕು ಎಂಬುದು ಮೋದಿ ಅವರ ಸಂಕಲ್ಪ. ಅದರಂತೆ ನಾವು ಪಶುಗಳನ್ನು ರೈತರಿಗೆ ಲಾಭದಾಯಕವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಪಶುಗಳು ಕಸಾಯಿ ಖಾನೆಗೆ ಹೋಗಬಾರದೆಂದರು. ವಕ್ಫ್ ಆಸ್ತಿ ಸಂರಕ್ಷಣೆ ವಿಚಾರದಲ್ಲಿ ಈ ಹಿಂದೆ ಮಾನ್ಪಡಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಮುಂದಿನ ಅಧಿವೇಶನದಲ್ಲಿ ಅದನ್ನು ಮಂಡಿಸುವ ರಾಜ್ಯದಲ್ಲಿ ವಕ್ಫ್ ಆಸ್ತಿಯನ್ನು ಸಂರಕ್ಷಿಸುವ ಕೆಲಸ ಮಾಡಲಾಗುವುದೆಂದರು.
ರಾಜ್ಯದಲ್ಲಿ ದಿನೇ ದಿನೇ ಮಹಾಮಾರಿ ಕೋವಿಡ್ ಹೆಚ್ಚಾಗುತ್ತಿದ್ದು ಸೊಂಕು ನಿಯಂತ್ರಣಕ್ಕೆ ಸಿಎಂ ಸೇರಿದಂತೆ ಸಚಿವರು ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ. ಆದರೆ ಸೋಂಕು ಹೆಚ್ಚಾಗುತ್ತಿದೆಯೆಂದು ಲಾಕ್‌ಡೌನ್ ಮಾಡುವುದಕ್ಕೆ ಆಗಲ್ಲ. ಪ್ರತಿಯೊಬ್ಬರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್ ಬಳಸಬೇಕೆಂದು ಸಾರ್ವಜನಿಕರಿಗೆ ಸಲಹೆ ನೀಡಿದರು.