ಚಿಕ್ಕಬಳ್ಳಾಪುರ: ಕಳೆದೊಂದು ವಾರದಿಂದ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಮನೆಯೊಂದು ಬಿದ್ದಿದೆ. (House collapsed in Chikkaballapur) ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ (Heavy rain in Chikkaballapura) ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಒಂದೆಡೆ ಅಧಿಕ ಮಳೆಯಿಂದ ಕೆರೆಕಟ್ಟೆಗಳು ಒಡೆದು ಕೆಲವು ಗ್ರಾಮಗಳು ಜಲದಿಗ್ಬಂಧನಕ್ಕೆ ಒಳಗಾಗಿವೆ. ಮತ್ತೊಂದೆಡೆ, ರೈತರು ಬೆಳೆದ ಬೆಳೆ ನೀರುಪಾಲಾಗಿದೆ.
ಧಾರಾಕಾರ ಮಳೆಗೆ ವೀರಾಪುರ ಗ್ರಾಮದ ಶಂಕರಪ್ಪ ಮತ್ತು ಶಿವಮ್ಮ ಎಂಬವರಿಗೆ ಸೇರಿದ ಸುಮಾರು 30 ವರ್ಷಗಳ ಹಿಂದಿನ ಹಳೆಯ ಮನೆ ಕುಸಿದು ಬಿದ್ದಿದ್ದು, ಸಂಪೂರ್ಣ ನೆಲಸಮವಾಗಿದೆ. ಕಳೆದ ತಿಂಗಳಿನಿಂದ ಜೋರು ಮಳೆಯಾಗುತ್ತಿದ್ದು ಎಚ್ಚೆತ್ತುಕೊಂಡ ಶಿವಮ್ಮ ಪಕ್ಕದ ಮನೆಯಲ್ಲಿ ಮಲಗಲು ತೆರಳುತ್ತಿದ್ದರು. ಇದರಿಂದಾಗಿ ಮನೆಯವರಿಬ್ಬರೂ ಸುರಕ್ಷಿತರಾಗಿದ್ದಾರೆ.
ಶಿವಮ್ಮ, ಶಂಕರಪ್ಪ ದಂಪತಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಮನೆ ಕುಸಿದ ಪರಿಣಾಮ ಇದ್ದ ಸೂರು ಕಳೆದುಕೊಂಡು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಮಧುಗಿರಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಗಾತ್ರದ ಬಂಡೆ: ತಪ್ಪಿದ ಭಾರಿ ಅನಾಹುತ