ಚಿಕ್ಕಬಳ್ಳಾಪುರ: ಹಿರೇನಾಗವಲ್ಲಿಯ ಕ್ವಾರಿಯಲ್ಲಿ ಸಂಭವಿಸಿದ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಿಜೆಪಿ ಮುಖಂಡ ಹಾಗೂ ಮತ್ತೋರ್ವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಗುಡಿಬಂಡೆ ಮೂಲದ ಬಿಜೆಪಿ ಮುಖಂಡ ಹಾಗೂ ದಕ್ಷಿಣ ರೈಲ್ವೆ ಸಲಹಾ ಸಮಿತಿ ಸದಸ್ಯ ಮೊದಲ ಆರೋಪಿ ಗುಡಿಬಂಡೆ ನಾಗರಾಜ್ ಹಾಗೂ ಬಾಂಬ್ ಸ್ಫೋಟಕಕಾರ ತಮಿಳುನಾಡು ಮೂಲದ ಗಣೇಶ್ ಎಂಬುವರನ್ನು ಹೊಸೂರು ಬಳಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಈವರೆಗೆ ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಮೂವರ ದುರ್ಮರಣ
ಆರೋಪಿಗಳ ವಿವಿರ:
ನಾಗರಾಜ್, ರಿಯಾಜ್, ಮಧುಸೂದನ್ ರೆಡ್ಡಿ, ಪ್ರವೀಣ್, ವೆಂಕಟೇಶ ರೆಡ್ಡಿ , ರಾಘವೇಂದ್ರ ರೆಡ್ಡಿ, ಗಣೇಶ್ ಮತ್ತು ವೆಂಕಟ ಶಿವಾರೆಡ್ಡಿ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಗೋಪಾಲರಡ್ಡಿ ಹಾಗೂ ಇನ್ಸ್ಪೆಕ್ಟರ್ ಮಂಜುನಾಥ್ ಅಮಾನತುಗೊಂಡಿದ್ದಾರೆ.