ಚಿಕ್ಕಬಳ್ಳಾಪುರ : ಜಿಲ್ಲೆಯ ಅನೇಕ ಶಾಲೆಗಳ ಮೇಲೆ 66ಕೆವಿ ವಿದ್ಯುತ್ ಲೈನ್ಗಳು ಹಾದು ಹೋಗಿವೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ 35 ಶಾಲೆಗಳು, ಬಾಗೇಪಲ್ಲಿಯ 4, ಗೌರಿಬಿದನೂರಿನ 5, ಶಿಡ್ಲಘಟ್ಟದ 22, ಚಿಂತಾಮಣಿಯ 1 ಶಾಲೆಯ ಮೇಲೆ 66 ಕೆವಿ ಹೈವೋಲ್ಟೇಜ್ ವಿದ್ಯುತ್ ಲೈನ್ ಹಾದು ಹೋಗಿದೆ.
ಚಿಕ್ಕಬಳ್ಳಾಪುರ ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ಗೆ ಶಾಲೆಗಳ ಮೇಲೆ ಇರುವ ಹೈವೋಲ್ಟೇಜ್ ವೈಯರ್ಗಳನ್ನು ತೆರುವುಗೊಳಿಸುವಂತೆ ಶಾಲೆಗಳ ಪಟ್ಟಿ ನೀಡಿ ತಿಂಗಳುಗಳು ಕಳೆದಿದ್ರೂ ಕೂಡ ಕ್ರಮಕ್ಕೆ ಮುಂದಾಗಿಲ್ಲ ಎಂದು ಡಿಡಿಪಿಐ ಜಯರಾಮರೆಡ್ಡಿ ತಮ್ಮ ಅಸಾಯಕತೆ ತೋಡಿಕೊಂಡಿದ್ದಾರೆ.
ಇನ್ನೂ ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪೋಷಕರು, ಹೈವೋಲ್ಟೇಜ್ ವೈಯರ್ಗಳಿಂದ ಬಿಡುಗಡೆ ಆಗುವ ರೇಡಿಯೇಷನ್ಗಳು ಮಕ್ಕಳ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಬುದ್ಧಿಮಾಂದ್ಯ ಆಗುವ ಸಾಧ್ಯತೆಗಳಿವೆ. ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವುದರ ಜೊತೆಗೆ ಅನಾರೋಗ್ಯ ಸಂಭವಿಸಿಸುವ ಭೀತಿ ಇದೆ. ಹಾಗಾಗಿ, ಕೂಡಲೇ ವಿದ್ಯುತ್ ತಂತಿಗಳನ್ನು ಬೇರೆಡೆ ಶಿಫ್ಟ್ ಮಾಡಿ ಎಂದು ಪೋಷಕರು ಶಿಕ್ಷಣ ಇಲಾಖೆ ಮತ್ತು ಬೆಸ್ಕಾಂಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಮಹಿಳಾ ಟ್ರಾಫಿಕ್ ಇನ್ಸ್ಪೆಕ್ಟರ್
ಶಾಲೆಗಳಿಗೆ ಬೇಸಿಗೆ ರಜೆ ಇದ್ದು ಶಾಲೆ ಆವರಣದಲ್ಲಿರುವ ವಿದ್ಯುತ್ ಲೈನ್ಗಳನ್ನು ತೆರವು ಮಾಡಿಸಲು ಇದು ಒಳ್ಳೆಯ ಸಮಯ. ಬೆಸ್ಕಾಂ ಇಲಾಖೆ ಶಾಲೆಗಳ ಮೇಲೆ ಹಾದು ಹೋಗಿರುವ 66Kv ಹೈವೋಲ್ಟೇಜ್ ಲೈನ್ಗಳನ್ನು ತೆರುವುಗೊಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕಿದೆ.