ETV Bharat / state

ಮೌಲಾ ಶರೀಫ್ ಟ್ರಸ್ಟ್​ನಿಂದ 10 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ - Maula Sharif Trust

ಕೊರೊನಾ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿದ್ದು, ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದವರು ರಂಜಾನ್‌ ಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂದು ಸಮಾಜ ಸೇವಕ ಸಿ.ಕೆ.ಮೌಲಾ ಶರೀಫ್ ಸಲಹೆ ನೀಡಿದರು.

Groceries kit   Distribution
ಮೌಲಾ ಶರೀಫ್ ಟ್ರಸ್ಟ್​ನಿಂದ ದಿನಸಿ ಪದಾರ್ಥಗಳ ಕಿಟ್ ವಿತರಣೆ
author img

By

Published : May 23, 2020, 7:13 PM IST

ಬಾಗೇಪಲ್ಲಿ: ಸಮಾಜ ಸೇವಕ ಸಿ.ಕೆ.ಮೌಲಾ ಶರೀಫ್ ಟ್ರಸ್ಟ್​​​​ನಿಂದ 10,000 ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.

ತಮ್ಮ ಸ್ವಗೃಹ ಮುಂದೆ 10,000 ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿ ಮಾತನಾಡಿದ ಅವರು, ಕೊರೊನಾ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿದ್ದು, ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದವರು ರಂಜಾನ್‌ ಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂದು ಸಲಹೆ ನೀಡಿದರು.

ಕೊರೊನಾ‌ ತಡೆಗಟ್ಟುವ ಸೂಕ್ತ ಕ್ರಮವೆಂದರೆ ಸಾಮಾಜಿಕ ಅಂತರ ಕಾಪಾಡುವುದು. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಹಬ್ಬದ ಆಚರಣೆಗಾಗಿ ಗುಂಪು ಗುಂಪಾಗಿ ಬಟ್ಟೆ ಖರೀದಿ, ದಿನಸಿ ಸೇರಿದಂತೆ ಇತರ ಸಾಮಗ್ರಿಗಳ ಖರೀದಿಯಿಂದ ದೂರವಿರಬೇಕು. ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಬೇಕು. ತಮ್ಮ ಟ್ರಸ್ಟ್ ವತಿಯಿಂದ ಬಡ ಕುಟುಂಬಗಳಿಗೆ ದಿನಸಿ ಹಾಗೂ ಇತರ ಸಾಮಗ್ರಿಗಳ ಕಿಟ್‌ಗಳನ್ನು ವಿತರಣೆ ಮಾಡುತ್ತಿದ್ದೇನೆ ಎಂದರು.

ಕೇವಲ ಮುಸ್ಲಿಂ ಸಮಾಜದವರಿಗೆ ಮಾತ್ರವಲ್ಲದೇ ಉಳಿದ ಸಮಾಜದ ಕಡು ಬಡ ಕುಟುಂಬದವರಿಗೆ ಕಿಟ್‌ಗಳನ್ನು ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಜೂಲಪಾಳ್ಯ ವ್ಯಾಪ್ತಿಯ ಸುಮಾರು 25 ಆಶಾ ಕಾರ್ಯಕರ್ತರಿಗೆ ಕೂಡ ದಿನಸಿ ವಿತರಣೆ ಮಾಡಲಾಯಿತು.

ಕೊರೊನಾ ವೈರಸ್ ವಿಮುಕ್ತಿಗಾಗಿ ಗಂಗಾ ಜಲ ವಿತರಣೆ: ಗಂಗಾ ಜಲ ಮಹಾಭಾರತದಲ್ಲಿ ವಿಶೇಷ ಪ್ರಾಮುಖ್ಯತೆ ಹೊಂದಿದೆ. ಕೊರೊನಾ ಸೋಂಕನ್ನು ಗಂಗಾ ಜಲದಿಂದ ಗುಣಪಡಿಸುವ ಶಕ್ತಿ ಇದೆ ಎಂಬ ನಂಬಿಕೆಯಿಂದ ಗಂಗಾಜಲ ವಿತರಣೆ ಮಾಡುತ್ತಿದ್ದೇವೆ ಎಂದು ಸಿ.ಕೆ.ಮೌಲಾ ಶರೀಫ್ ಟ್ರಸ್ಟ್ ನ ಉಪಾಧ್ಯಕ್ಷ ಸಿ.ಕೆ.ಮಹಮ್ಮದ್ ಶರೀಫ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.