ETV Bharat / state

ಗೌರಿಬಿದನೂರಿನ ಸೈನಿಕನೀಗ ಲೆಫ್ಟಿನೆಂಟ್​ ಕರ್ನಲ್​​... 23 ವರ್ಷದ ಸೇವೆಗೆ ಒಲಿದು ಬಂತು ಹುದ್ದೆ - ಗೌರಿಬಿದನೂರಿನ ಸೈನಿಕ ಲಿಫ್ಟಿನೆಂಟ್​ ಕರ್ನಲ್​

23 ವರ್ಷಗಳ ಸೇನಾ ಸೇವೆಯಲ್ಲಿ 10 ವರ್ಷಗಳ ಕಾಲ ಸೈನಿಕನಾಗಿ ಸೇವೆ ಸಲ್ಲಿಸಿರುವ ಗೌರಿಬಿದನೂರಿನ ಸಿಪಾಯಿಯೋರ್ವರಿಗೆ ಇದೀಗ ಲೆಫ್ಟಿನೆಂಟ್​ ಕರ್ನಲ್ ಹುದ್ದೆ ಒಲಿದು ಬಂದಿದೆ.

Gauribidanur soldier become Lieutenant colonel

author img

By

Published : Dec 16, 2021, 2:35 AM IST

Updated : Dec 16, 2021, 5:23 AM IST

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ಸೈನಿಕರೊಬ್ಬರು ಇದೀಗ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಬಡ್ತಿ ಹೊಂದಿದ್ದು, ಇದರಿಂದ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

Gauribidanur soldier become Lieutenant colonel
ಭಾರತೀಯ ಸೇನೆಯಲ್ಲಿ 23 ವರ್ಷಗಳ ಕಾಲ ಸೇವೆ

ತಮ್ಮ 23 ವರ್ಷಗಳ ಸೇನಾ ಸೇವೆಯಲ್ಲಿ 10 ವರ್ಷಗಳ ಕಾಲ ಸೈನಿಕನಾಗಿ ಸೇವೆ ಸಲ್ಲಿಸಿ, ಸೇನೆಯಲ್ಲಿಯೇ ಪರೀಕ್ಷೆ ಬರೆದಿರುವ ಹರ್ಷ ರಾಜಶೇಖರ್ ಇದೀಗ ಈ ಉನ್ನತ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇವರ ತಂದೆ ಗೌರಿಬಿದನೂರು ತಾಲ್ಲೂಕಿನ ಕೋಟಾಲದಿನ್ನೆ ಬಳಿ ಇರುವ ಆಕಾಶವಾಣಿ ವೀಕ್ಷಣಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ.

ಲೆಫ್ಟಿನೆಂಟ್​ ಕರ್ನಲ್ ಆದ ಹರ್ಷ ರಾಜಶೇಖರ್

ಹರ್ಷ ರಾಜಶೇಖರ್​​​ ಅವರು ನಗರದ ಆಚಾರ್ಯ ಪ್ರೌಢಶಾಲೆಯಲ್ಲಿ ತಮ್ಮ ಬಾಲ್ಯದ ವಿದ್ಯಾಭ್ಯಾಸ ಮುಗಿಸಿ, ನಂತರ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದರು. ಓದುವುದರಲ್ಲಿ ಅಷ್ಟೇನೂ ಬುದ್ಧಿವಂತ ಆಗಿರಲಿಲ್ಲವಾದ್ರೂ, ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಬಾಸ್ಕೆಟ್ ಬಾಲ್ ಅಂದ್ರೆ ಇವರಿಗೆ ಪಂಚಪ್ರಾಣ. 1998ರಲ್ಲಿ ಸ್ಪೋರ್ಟ್ಸ್ ಕೋಟಾದಲ್ಲಿ ಮದ್ರಾಸ್‌ನಲ್ಲಿ ಸಿಪಾಯಿ ಆಗಿ ದೇಶ ಸೇವೆ ಆರಂಭಿಸಿ ಇವರು, ತದನಂತರ ಬೆಂಗಳೂರಿನಲ್ಲೂ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಬಾಸ್ಕೆಟ್ ಬಾಲ್​ನಲ್ಲಿ ವಿಶೇಷ ಆಸಕ್ತಿ ಹೊಂದಿರುವ ಹರ್ಷ ರಾಜಶೇಖರ್​​

ಲೆಫ್ಟಿನೆಂಟ್​​​ ಕರ್ನಲ್​​​ ಆಗಲು ಪರೀಕ್ಷೆ ಬರೆದು ಸೇನಾ ಆಯ್ಕೆ ಮಂಡಳಿ ಸಂದರ್ಶನದಲ್ಲಿ ತೇರ್ಗಡೆಯಾದರು. ಡೆಹ್ರಾಡೂನ್ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಪದವಿ ಪಡೆದು 2008ರಲ್ಲಿ ಮಿಲಿಟರಿ ತರಬೇತಿಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. 13 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಇದೀಗ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಬಡ್ತಿ ಪಡೆದುಕೊಂಡಿದ್ದಾರೆ. ಈ ಸುದ್ದಿ ಕೇಳುತ್ತಿದ್ದಂತೆ ಜಿಲ್ಲೆಯ ಜನತೆಗೆ ಸಂಭ್ರಮದಲ್ಲಿ ತೊಡಗಿದ್ದಾರೆ.

ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಹರ್ಷ ರಾಜಶೇಖರ್​

ಇದನ್ನೂ ಓದಿರಿ: ಕನ್ನಡ ಧ್ವಜ ಸುಟ್ಟ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮಹಾರಾಷ್ಟ್ರ ಸಿಎಂಗೆ ಸಿದ್ದರಾಮಯ್ಯ ಒತ್ತಾಯ

ಜಿಲ್ಲೆಯ ಓರ್ವ ಯುವಕ ಸೇನೆಯಲ್ಲಿ ಉನ್ನತ ಸ್ಥಾನ ಪಡೆದಿರುವುದು ಇಡೀ ಜಿಲ್ಲೆಗೆ ಹೆಮ್ಮೆ ಪಡುವಂತಹ ವಿಚಾರವಾಗಿದ್ದು, ಅವರ ಕುಟುಂಬಕ್ಕೆ ಇದೀಗ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

Last Updated : Dec 16, 2021, 5:23 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.